14 ವರ್ಷದ ಬಾಲಕಿಗೆ ಪ್ರೀತಿಸುವಂತೆ 4 ಬಾಲಕರ ಕಿರುಕುಳ: ಬಾಲಕಿ ಆತ್ಮಹತ್ಯೆ

Share It

ಮಂಡ್ಯ: ಪ್ರೀತಿಸುವಂತೆ ಬೆನ್ನುಬಿದ್ದಿದ್ದ 4 ಬಾಲಕರ ಕಿರುಕುಳದಿಂದ ಬೇಸತ್ತಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಹನಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಇಂಪನಾ (14) ಮೃತ ಬಾಲಕಿ. ಮಂಡ್ಯದ ವಿವೇಕ ವಿದ್ಯಾಸಂಸ್ಥೆಯ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿಗೆ ಪ್ರೀತಿಸುವಂತೆ ನಾಲ್ವರು ಬಾಲಕರು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ. ಇಬ್ಬರು ಬಾಲಕರು ಹನಕೆರೆ ಗ್ರಾಮದವರಾಗಿದ್ದು, ಒಬ್ಬ ಕಚ್ಚಿಗೆರೆ ಗ್ರಾಮ ಮತ್ತು ಮತ್ತೊಬ್ಬ ಮಲ್ಲಯ್ಯನದೊಡ್ಡಿ ಗ್ರಾಮ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ.

ಕಾನೂನು ಸಂಘರ್ಷಕ್ಕೊಳಗಾದ ನಾಲ್ವರು ಬಾಲಕರು, ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ರೆನ್ನಲಾಗಿದ್ದು, ಈ ವಿಚಾರವಾಗಿ ಯುವಕರ ನಡುವೆಯೇ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆಯಲ್ಲದೆ, ಬಾಲಕಿ ತಾಯಿಯ ವಾಟ್ಸಪ್‌ಗೂ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತ ಬಾಲಕರು ಪರಾರಿಯಾಗಿದ್ದು, ಬಾಲಕಿಯ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You May Have Missed

You cannot copy content of this page