ವಿಜಯಪುರ: ಇಟ್ಟಿಗೆ ಫ್ಯಾಕ್ಟರಿಯ ಕಾರ್ಮಿಕರ ಮೇಲೆ ಮಾಲೀಕನೇ ಪೈಪ್‌ಗಳಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಇಟ್ಟಿಗೆ ಫಾಕ್ಟರಿ ಮಾಲೀಕ ಖೇಮು ರಾಥೋಡ್ ಎಂಬಾತ ತನ್ನ ಸಹಚರರ ಜತೆಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾನೆ. ಉಮೇಶ್ ಮಾದಾರ, ಸದಾಶಿವ ಮಾದಾರ ಮತ್ತು ಸದಾಶಿವ ಚಲವಾದಿ ಎಂಬ ಕಾರ್ಮಿಕರು ಹಬ್ಬಕ್ಕೆ ತಮ್ಮ ಊರುಗಳಿಗೆ ಹೋಗಿ ವಾಪಸ್ ಬರಲು ತಡ ಮಾಡಿದ್ದರು.
ಅಡ್ವಾನ್ಸ್ ಪಡೆದಿದ್ದರೂ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಲಿಲ್ಲ ಎಂಬ ನೆಪದಲ್ಲಿ ಊರಿನಿಂದ ವಾಪಸ್ ಬಂದ ಕಾರ್ಮಿಕರನ್ನು ಹಿಡಿದುಕೊಂಡು ಕಬ್ಬಿಣದ ಪೈಪ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ಈ ಅಮಾನವೀಯ ಘಟನೆಯ ವಿಡಿಯೋ ವೈಲ್ ಆಗಿದ್ದು, ಘಟನೆ ಸಂಬAಧ ಪ್ರಕರಣ ದಾಖಲಾಗಿದೆ.
ಕಾರ್ಮಿಕರೆಲ್ಲರೂ ಬಾಗಲಕೋಟೆ ಜಿಲ್ಲೆಯ ಚಿಕ್ಕಲಿಕಿ ಗ್ರಾಮದವರು ಎಂದು ಹೇಳಲಾಗಿದೆ. ಘಟನೆಗೆ ಸಂಬAಧಿಸಿದAತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಲೀಕ ಖೇಮು ಮತ್ತು ಆತನ ಸಹಚರರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ಹಲ್ಲೆಗೊಳಗಾದ ಕಾರ್ಮಿಕರಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಕರಣದ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.