ಮದರಸದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ: ಪೋಷಕರ ಆಕ್ರೋಶ
ಬೆಂಗಳೂರು: ರಾಜಧಾನಿಯ ಮದರಸವೊಂದರಲ್ಲಿ ಬಾಲಕಿಯರನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ.
ಹೆಗಡೆ ನಗರದಲ್ಲಿರುವ ಮದರಸದಲ್ಲಿ ಘಟನೆ ನಡೆದಿದ್ದು, ಬಾಲಕಿಯರನ್ನು ಕಚೇರಿಗೆ ಕರೆದು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮದಸರದ ಪ್ರಿನ್ಸಿಪಾಲ್ ಸಹೋದರ ಮಹಮ್ಮದ್ ಹಸನ್ ಎಂಬಾತನಿAದ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಮದರಸ ಮುಂದೆ ಜಮಾಯಿಸಿರುವ ಪೋಷಕರು ಆರೋಪಿಯನ್ನು ಬಂಧಿಸುವAತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊತ್ತನೂರು ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.


