ಸಿನಿಮಾ ಸುದ್ದಿ

ಏನ್ ನಡೀತಿದೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ?

Share It


ಬೆಂಗಳೂರು: ಕನ್ನಡ ಚಲನಚಿತ್ರ ಕಲಾವಿದರ ಸಂಘ ಎಂಬುದೊಂದಿದೆ ಎಂಬುದೇ ಗೊತ್ತಿಲ್ಲದ ಅನೇಕ ಕಲಾವಿದರಿದ್ದಾರೆ. ಆದರೆ, ಕೆಲವು ಅನಾಮಧೇಯರ ಕೈಲಷ್ಟೇ ಸಂಘವಿದ್ದು, ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹಿರಿಯ ನಟ ದೊಡ್ಡಣ್ಣ ಹೊರತುಪಡಿಸಿ ಉಳಿದ ಯಾವ ಕಲಾವಿದರು ಕೂಡ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆ ಇಲ್ಲ. ಖಜಾಂಚಿಯಾದ ದೊಡ್ಡಣ್ಣ ಅವರಾದರೂ, ಈವರೆಗೆ ಸಂಘದ ಆಡಿಟ್ ನಡೆಸಿಲ್ಲ, ಪ್ರತಿ ವರ್ಷ ಪದಾಧಿಕಾರಿಗಳ ಸಭೆ ನಡೆಸಿ, ಚುನಾವಣೆ ಮೂಲಕ ಹೊಸ ಪದಾಧಿಕಾರಿಗಳ ಆಯ್ಕೆ ಮಾಡುವ ಪ್ರಕ್ರಿಯೆ ಕಳೆದು 16 ವರ್ಷದಿಂದ ನಡೆದೇ ಇಲ್ಲ ಎನ್ನಲಾಗಿದೆ.

ಸಂಘದ ಹಿಂದಿನ ಬಹುತೇಕ ಸದಸ್ಯರು ಮೃತಪಟ್ಟಿದ್ದು, ಹೊಸ ಕಲಾವಿದರ ನೋಂದಣಿ ಕಾರ್ಯವನ್ನು ಹದಿನಾರು ವರ್ಷದಿಂದ ಮಾಡಿಕೊಂಡಿಲ್ಲ. ಕೇವಲ 80 ಸದಸ್ಯರೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದೆ. ಆದರಡ, ಯಾವುದೇ ಅಧಿಕೃತ ಕಾರ್ಯಚಟುವಟಿಕೆ ನಡೆಸದೆ, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಂಘದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು, ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿರುವ ಎನ್.ಆರ್. ರಮೇಶ್, ವಾರ್ಷಿಕ ಚುನಾವಣೆ ನಡೆಸಿ, ಸಂಘವನ್ನು ಅಧಿಕೃತವಾಗಿ ನಡೆಸಲು ಮನವಿ ಮಾಡಿದ್ದಾರೆ. ಈವರೆಗೆ ಕಲಾವಿದರಲ್ಲದವರು ಸೇರಿ ಎಸಗಿರುವ ಅಕ್ರಮಗಳ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.

1979 ರಲ್ಲಿ ಡಾ. ರಾಜ್ ಕುಮಾರ್ ನೇತೃತ್ವದಲ್ಲಿ “ಕನ್ನಡ ಚಲನಚಿತ್ರ ಕಲಾವಿದರ ಸಂಘ”ವು ಸ್ಥಾಪನೆಯಾಗಿದ್ದು, 2007 ರವರೆಗೆ ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿತ್ತು. ರಾಜ್ ಕುಮಾರ್ ನಿಧನದ ನಂತರ 2008 ರಿಂದ ಇದುವರೆವಿಗೆ ಸಂಘದ ಚುನಾವಣೆ ನಡೆದಿಲ್ಲ, ಆಡಿಟ್ ವರದಿ ಸಲ್ಲಿಸಿಲ್ಲ, ವಾರ್ಷಿಕ ಸಭೆ ನಡೆಸಿಲ್ಲ, ಹೊಸ ಸದಸ್ಯರ ನೋಂದಣಿಗೆ ಕ್ರಮವಹಿಸಿಲ್ಲ. ಹೀಗಾಗಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.


Share It

You cannot copy content of this page