ಇಂದು ಸ್ನೇಹಮಯಿ ಕೃಷ್ಣ ಇಡಿ ವಿಚಾರಣೆಗೆ ಹಾಜರ್ !
ಮೈಸೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿರುವ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು ಇಂದು ವಿಚಾರಣೆಗೆ ಅವರು ಹಾಜರಾಗಲಿದ್ದಾರೆ.
ಇಡಿ ತನ್ನ ಬೆಂಗಳೂರಿನ ಕಚೇರಿಯಲ್ಲಿ ವಿಚಾರಣೆಗಾಗಿ ನನ್ನನ್ನು ಕರೆದಿದೆ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರಡಿ ತನಿಖೆಗೆ ಸಂಬಂಧಿಸಿದಂತೆ ನಾನು ಎಲ್ಲಾ ದಾಖಲೆಗಳೊಂದಿಗೆ ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.


