ಅಪರಾಧ ಸುದ್ದಿ

ಬ್ಯಾಂಕ್ ಸಾಲ ಮರುಪಾವತಿ ಮಾಡದೆ ಮಾಲೀಕ ಪರಾರಿ: ಮನೆ ಸೀಜ್, ಬಾಡಿಗೆದಾರರ ಪರದಾಟ

Share It

ಬೆಂಗಳೂರು: ಐದು ಮನೆಗಳ ಮೇಲೆ ಸಾಲ ಪಡೆದಿದ್ದ ಮಾಲೀಕ ಪರಾರಿಯಾಗಿದ್ದು, ಬ್ಯಾಂಕ್ ಮನೆಯನ್ನು ಸೀಜ್ ಮಾಡಿದೆ. ಇದೀಗ ಮನೆಯಲ್ಲಿ ಬಾಡಿಗೆ ಮತ್ತು ಭೋಗ್ಯಕ್ಕೆ ಇದ್ದವರು ಬೀದಿಪಾಲಾಗಿರುವ ಘಟನೆ ನಡೆದಿದೆ.

ಪೀಣ್ಯ ಎರಡನೇ ಹಂತದಲ್ಲಿ ತಿಮ್ಮರಾಜ್ ಎಂಬ ಮಾಲೀಕ ಡಿಸಿಬಿ ಬ್ಯಾಂಕ್‌ನಿAದ ಲಕ್ಷಾಂತರ ರುಪಾಯಿ ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ, ಸಾಲ ಕಟ್ಟದೆ ಪರಾರಿಯಾಗಿದ್ದು, ಬ್ಯಾಂಕ್ ನವರು ಬಂದು ಮನೆಗೆ
ಬೀಗ ಜಡಿದಿದ್ದಾರೆ.

ಮಾಲೀಕನಿಗೆ ಲಕ್ಷಾಂತರ ರುಪಾತಿ ಲೀಸ್ ಹಣ ಮತ್ತು ಅಡ್ವಾನ್ಸ್ ಹಣ ನೀಡಿ ಬಾಡಿಗೆಗಿದ್ದವರನ್ನು ಏಕಾಏಕಿ ಮನೆಯಿಂದ ಹೊರಗೆ ಹಾಕಲಾಗಿದೆ. ಇತ್ತ ಲೀಸ್ ಹಣವೂ ಇಲ್ಲದೆ ಅಡ್ವಾನ್ಸ್ ಹಣವೂ ಇಲ್ಲದೆ ಬಾಡಿಗೆದಾರರು ಪರದಾಟ ನಡೆಸುತ್ತಿದ್ದಾರೆ.

ಆತಂಕಗೊAಡ ಬಾಡಿಗೆದಾರರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕುಟುಂಬ ಸಮೇತ ಪೊಲೀಸ್ ಠಾಣೆಯ ಮುಂದೆ ಬಂದು ನಿಂತು ಗೋಳಾಡುತ್ತಿದ್ದಾರೆ.


Share It

You cannot copy content of this page