ಉಪಯುಕ್ತ ಸುದ್ದಿ

ಪ್ರಧಾನಿ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್ ದಾಸ್ ನೇಮಕ

Share It

ಹೊಸದಿಲ್ಲಿ: ಆರ್‌ಬಿಐ ನಿವೃತ್ತ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ-2 ಆಗಿ ನೇಮಕಗೊಳಿಸಿ ಆದೇಶಿಸಲಾಗಿದೆ.

ಸಂಪುಟದ ನೇಮಕ ಸಮಿತಿ ಈ ಕುರಿತು ಆದೇಶ ಮಾಡಿದ್ದು, ಶಕ್ತಿಕಾಂತ್ ದಾಸ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ದಾಸ್ ಅವರು ಸೆ.11, 2019 ರಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಪ್ರಮೋದ್ ಕುಮಾರ್ ಮಿಶ್ರಾ ಅವರ ಜತೆಗೆ ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ಜೂನ್ 2024 ರಲ್ಲಿ ಮರುನೇಮಕ ಮಾಡಲಾಗಿತ್ತು. ಇದೀಗ ಅವರ ಜತೆಗೆ ಹೆಚ್ಚುವರಿಯಾಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಲಾಗಿದೆ.


Share It

You cannot copy content of this page