ಅಪರಾಧ ಸುದ್ದಿ

ಸ್ನೇಹಿತರ ಜತೆ ಪಾರ್ಟಿಗೆ ತೆರಳಿದ್ದ ಯುವಕ ಶವವಾಗಿ ಪತ್ತೆ:

Share It

ಬೆಂಗಳೂರು: ಸ್ನೇಹಿತರ ಜತೆ ಪಾರ್ಟಿಗೆಂದು ರೆಸಾರ್ಟ್ಗೆ ತೆರಳಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದು, ಆತನ ಸಾವಿಗೆ ಸ್ನೇಹಿತರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ತಾಲೂಕಿನ ಮಹಾಂತೇಶ್ ಎಂಬ ವ್ಯಕ್ತಿ ತನ್ನ 20ಕ್ಕೂ ಹೆಚ್ಚು ಸ್ನೇಹಿತರ ಜತೆ ಖಾನಾಪೂರ ತಾಲೂಕಿನ ರೆಸಾರ್ಟ್ಗೆ ತೆರಳಿದ್ದ. ಎರಡು ದಿನಗಳ ಕಾಲ ಅಲ್ಲಿ ಮೋಜು ಮಸ್ತಿಯಲ್ಲಿ ಸ್ನೇಹಿತರೆಲ್ಲ ತೊಡಗಿಸಿಕೊಂಡಿದ್ದರು. ಆದರೆ, ಎರಡನೇ ದಿನ ಬೆಳಗ್ಗೆ ವೇಳೆಗೆ ಮಹಾಂತೇಶ್ ಸಾವನ್ನಪ್ಪಿದ್ದಾನೆ ಎಂದು ಸ್ನೇಹಿತರೆಲ್ಲ ಪೋಲಿಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಈಜುಕೊಳದಲ್ಲಿ ಮುಳುಗಿ ಸಾವು ಸಂಬAಧಿಸಿದೆ ಎಂದು ಸ್ನೇಹಿತರು ಹೇಳುತ್ತಿದ್ದು, ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 20 ಜನರ ಪೈಕಿ ಮತ್ಯಾರೂ ಈಜುಕೊಳಕ್ಕೆ ಇಳಿಯದೆ ಇರುವ ಸಂದರ್ಭದಲ್ಲಿ ಈತ ಮಾತ್ರ ಈಜುಕೊಳಕ್ಕೆ ಇಳಿದು ಸಾವನ್ನಪ್ಪಲು ಸಾಧ್ಯವೇ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರ ಮೇಲೆಯೇ ಪೋಷಕ ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ಬಂಧಿಸಿ, ವಿಚಾರಣೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಸಂಬAಧಿಕರು ಮತ್ತು ಪೋಷಕರು ವಾಗ್ದಾದಕ್ಕೆ ಮುಂದಾಗಿದ್ದು, ಅವರನ್ನು ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಮಹಾಂತೇಶ್ ಶವವನ್ನು ಬೆಳಗಾವಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.


Share It

You cannot copy content of this page