ಅಮೃತಸರ: ಅಮೃತಸರದ ಠಾಕೂರ್ ದ್ವಾರ ದೇವಾಲಯದ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಪಂಜಾಬ್ ಪೊಲೀಸರು ಎನ್ ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.
ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಬಂದು ದೇವಸ್ಥಾನದ ಮೇಲೆ ದಾಳಿ ನಡೆಸಿ, ಇಡೀ ದೇವಾಲಯವನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಸಿದ್ದರು. ಅವರೊಂದಿಗೆ ಕಾದಾಟ ನಡೆಸಿದ ಪೊಲೀಸರು, ಕೊನೆಗೆ ಆರೋಪಿಯನ್ನು ಹೊಡೆದುರುಳಿಸಿ, ದೇವಸ್ಥಾನದಲ್ಲಿದ್ದ ಭಕ್ತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಆರೋಪಿಯನ್ನು ಬಾಲ್ ಗ್ರಾಮದ ಗುರ್ಸೀದಕ್ ಸಿಂಗ್ ಎಂದು ಗುರುತಿಸಲಾಗಿದ್ದು, ತಪ್ಪಿಸಿಕೊಂಡ ಆರೋಪಿಯನ್ನು ರಾಜಸ್ಸಾನಿ ನಿವಾಸಿ ವಿಶಾಲ್ ಎಂದು ಹೇಳಲಾಗಿದೆ. ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಪ್ರತಿದಾಳಿಗೆ ಮುಂದಾಗಿದ್ದು, ಈ ವೇಳೆ ಕಾನ್ಸಟೇಬಲ್ ಗುರುಪ್ರೀತ್ ಸಿಂಗ್ ಹಾಗೂ ಇನ್ಸ್‌ಪೆಕ್ಟರ್ ಮೇಲೆ ದಾಳಿ ನಡೆಸಿದರು.
ಹೀಗಾಗಿ, ಪೊಲೀಸರು ಆರೋಪಿಗಳ ಮೇಲೆ ಗುಂಡುಹಾರಿಸಿದ್ದು. ಆಗ ಸಿಂಗ್ ಗಾಯಗೊಂಡಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.