ಕಾರವಾರ: ಕಾರಾವಾರ ನೌಕಾನೆಲೆಯ ಮಾಹಿತಿಯನ್ನು ಪಾಕ್ ಏಜೆಂಟ್ ಜತೆಗೆ ಹಂಚಿಕೊAಡ ಆರೋಪದಲ್ಲಿ ಕಾರವಾರದ ಇಬ್ಬರು ಯುವಕರನ್ನು ಎನ್ಐಎ ವಶಕ್ಕೆ ಪಡೆದಿದೆ.
ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ್ ತಾಂಡೇಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂಬುವವರು ಬಂಧಿತರು. ಈ ಇಬ್ಬರು ಯುವಕರು ಕಾರವಾರದ ಅಲ್ಟಾç ಮರೈನ್ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಎನ್ಐಎ ಟೀಂ ನೌಕಾನೆಲೆ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ2024 ರ ಆಗಸ್ಟ್ನಲ್ಲಿ ವಿಚಾರಣೆ ನಡೆಸಿತ್ತು. ಇದೀಗ ಮತ್ತೇ ಮೂವರ ವಿಚಾರಣೆ ನಡೆಸಲು ಆಗಮಿಸಿದ್ದ ಎನ್ಐಎ ತಂಡದ ಅಧಿಕಾರಿಗಳು ಈ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಜತೆಗೆ ಫೇಸ್ಬುಕ್ನಲ್ಲಿ ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕ್ ಏಜೆಂಟ್ ಎಲ್ಲ ಮಾಹಿತಿ ಪಡೆದುಕೊಂಡಿದ್ದರು. ಈ ಮಾಹಿತಿ ನೀಡಿದ್ದಕ್ಕೆ ಎಂಟು ತಿಂಗಳ ಕಾಲ ಆರೋಪಿಗಳ ಖಾತೆಗೆ ಹಣ ಜಮೆ ಮಾಡಿದ್ದರು ಎನ್ನಲಾಗಿದೆ.
ಯುದ್ಧನೌಕೆಗಳ ಆಗಮನ ಹಾಗೂ ಹೊರಡುವ ಸಮಯ ಹಾಗೂ ಅಲ್ಲಿರುವ ಭದ್ರತೆಯ ಮಾಹಿತಿಯನ್ನು ಪಾಕ್ ಏಜೆಂಟ್ ಗಳ ಜತೆಗೆ ಯುವಕರು ಹಂಚಿಕೊAಡಿದ್ದರು ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಎನ್ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.