ನರ್ಸ್ ಮತ್ತು ಡಾಕ್ಟರ್ ಜಡೆಜಗಳ : ಆತ್ಮಹತ್ಯೆ ಪ್ರಯತ್ನದ ಹೈಡ್ರಾಮಾ
ಭದ್ರಾವತಿ: ಕರ್ತವ್ಯದ ವಿಚಾರವಾಗಿ ಹಲವು ದಿನಗಳಿಂದ ಜಗಳ ಮಾಡಿಕೊಂಡ ವೈದ್ಯೆ ಹಾಗೂ ನರ್ಸ್ ಇಬ್ಬರೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭದ್ರಾವತಿ ತಾಲೂಕಿನ ಬಿಆರ್ ಪಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಿಆರ್ ಪಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಹಂಸವೇಣಿ ಅವರನ್ನು ನವಂಬರ್ ನಲ್ಲಿ ಕರ್ತವ್ಯ ಲೋಪ ಹಾಗೂ ಸಿಬ್ಬಂದಿ ಮತ್ತು ರೋಗಿಗಳ ಜತೆ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಸನ್ಯಾಸಿ ಕೊಡಮಗಿ ಆಸ್ಪತ್ರೆಗೆ ತಾತ್ಕಾಲಿಕ ನಿಯೋಜನೆ ಮಾಡಲಾಗಿತ್ತು. ಆದರೆ ಕೆಳೆದ ಒಂದು ವಾರದಿಂದ ಇವರಿಬ್ಬರ ನಡುವೆ ರಜೆ ಹಾಗೂ ಕರ್ತವ್ಯದ ವಿಚಾರವಾಗಿ ಜಗಳ ನಡೆದು ಆತ್ಮಹತ್ಯೆ ಯತ್ನದವರೆಗೆ ಬಂದು ನಿಂತಿದೆ.
ವೈದ್ಯೆ ಮತ್ತು ನರ್ಸ್ ಸುಕನ್ಯಾ ಎಂಬುವರು ಕೆಲಸದ ವಿಚಾರವಾಗಿ ಪರಸ್ಪರ ಪೋನಿನಲ್ಲಿ ಜಗಳ ಮಾಡಿಕೊಂಡಿದ್ದು, ವೈದ್ಯೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೇಲಧಿಕಾರಿಗಳಿಗೆ ಪತ್ರ ಬರೆದು ವಾಟ್ಸಾಪ್ ಮಾಡಿದ್ದಾರೆ. ನಂತರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ‘ನನ್ನ ಮೇಲೆ ಆಪಾದನೆ ಬರುವುದೆಂದು ಮದ್ಯಾಹ್ನದ ವೇಳೆಗೆ ಡಾ.ಹಂಸವೇಣಿ ಕೂಡ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಂದು ತಿಳಿದು
ಈ ವಿಷಯ
ಮೆಗ್ಗಾನ್ ಆಸ್ಪತ್ರೆಗೆ ಡಿಹೆಚ್ಓ ನಟರಾಜ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಈ ಕುರಿತು ತನಿಖೆ ನಡೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಬಿಆರ್ ಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸುಕನ್ಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ವೈದ್ಯೆ ಡಾ.ಹಂಸವೇಣಿ ಕೆಲಸದ ವಿಚಾರದ
ಕಿರುಕುಳ ನೀಡುತ್ತಿದ್ದಾಗಿ ಆರೋಪ ಕೇಳಿ ಬಂದಿದೆ. ಈ ಇಬ್ಬರ ಜಡೆಜಗಳ ಕುರಿತು ಅಧಿಕಾರಿಗಳಿಂದ ತನಿಖೆಯಾಗಬೇಕಿದೆ.


