ಕಲಬುರಗಿ: ರೈತರ ಪಂಪ್ ಸೆಟ್ ಗೆ ರಾತ್ರಿ ಜಾವದಲ್ಲಿ ವಿದ್ಯುತ್ ಸರಬರಾಜು ಮಾಡುವುದನ್ನು ವಿರೋಧಿಸಿ, ಕಲಬುರಗಿಯ ರೈತರು ಮೊಸಳೆಯನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಇಂತಹದ್ದೊAದು ವಿನೂತನ ಪ್ರತಿಭಟನೆಗೆ ಸಾಕ್ಷಿಯಾದ ಕಲಬುರಗಿ ಗೆಸ್ಕಾಂ ಕಚೇರಿ, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು. ಭಾರಿ ಗಾತ್ರದ ಮೊಸಳೆಯನ್ನು ಗಾಡಿಗೆ ಹಗ್ಗದಿಂದ ಕಟ್ಟಿ ತಂದು ನಿಲ್ಲಿಸಿದ್ದರು. ರೈತರ ಸಮಸ್ಯೆಗೆ ಪರಿಹಾರ ಸಿಕ್ಕ ನಂತರ ಮೊಸಳೆ ಕಲಬುರಗಿಯ ಮಿನಿ ಮೃಗಾಲಯಕ್ಕೆ ಸೇರಿಕೊಂಡಿತು.
ಜಿಲ್ಲೆಯ ವ್ಯಾಪ್ತಿಯಲ್ಲಿ ರೈತರಿಗೆ ಪಂಪ್ ಸೆಟ್ ಚಾಲನೆ ಮಾಡಲು ಬೆಳಗ್ಗೆ 4 ಗಂಟೆ ಸುಮಾರಿಗೆ ತ್ರಿ ಪೇಸ್ ವಿದ್ಯುತ್ ನೀಡಲಾಗುತ್ತದೆ. ಆ ಸಮಯದಲ್ಲಿ ರೈತರು ನೀಡು ಹರಿಸಲು ಹೋಗಲು ಅನೇಕ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳಲ್ಲಿ ಮೊಸಳೆಯ ಕಾಟವೂ ಕೂಡ ಒಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷö್ಮಣ ಪೂಜಾರಿ ಎಂಬ ರೈತರೊಬ್ಬರು ರಾತ್ರಿ ನೀರು ಕಟ್ಟಲು ಹೋಗಿದ್ದಾಗ, ಹತ್ತಿರದಲ್ಲಿದ್ದ ಕೊಟ್ಟಿಗೆಯಲ್ಲಿದ್ದ ಹಸುಗಳು ಕಿರುಚಲು ಆರಂಭಿಸಿದ್ದವು. ಹತ್ತಿರ ಓಗಿ ನೋಡಿದಾಗ ಕುರಿಗಳನ್ನು ಮೊಸಳೆ ತಿನ್ನುತ್ತಿರುವುದು ಕಂಡುಬAದಿತು. ಅದಾಗಲೇ ನಾಲ್ಕು ಕುರಿಗಳು ಕಾಣೆಯಾಗಿದ್ದು, ಮತ್ತೆರೆಡು ಕುರಿಗಳು ಮೊಸಳೆಯ ಬಾಯಲ್ಲಿ ಸಿಲುಕಿದ್ದವು.
ವಿಷಯ ತಿಳಿದ ಲಕ್ಷ್ಮಣ್ ಪೂಜಾರಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, 30 ನಿಮಿಷಗಳಲ್ಲಿ ಎಲ್ಲರೂ ಒಂದಾಗಿ ಮೊಸಳೆಯನ್ನು ಯಾವುದೇ ತೊಂದರೆಯಾಗದAತೆ ಬಂಧಿಸಿದರು. ಆದರೆ, ಇದಕ್ಕೆಲ್ಲ ಗೆಸ್ಕಾಂನವರು ರಾತ್ರಿ ವೇಳೆ ಕರೆಂಟ್ ಕೊಡುವುದು ಕಾರಣ ಎಂಬ ಆಕ್ರೋಶ ವ್ಯಕ್ತವಾಗತೊಡಗಿತು. ಹೀಗಾಗಿ, ರೈತರೆಲ್ಲರೂ ಸೇರಿ ಮೊಸಳೆಯನ್ನು ಗೆಸ್ಕಾಂ ಕಚೇರಿ ಬಳಿ ತಂದು ನಿಲ್ಲಸಿದರು.
ಗಾಬರಿಗೊಂಡ ಗೆಸ್ಕಾಂ ಸಿಬ್ಬಂದಿ, ರೈತರ ಅಳಲನ್ನು ಕೇಳಿಸಿಕೊಂಡು, ಶೀಘ್ರವೇ ವಿದ್ಯುತ್ ನೀಡುವ ವೇಳಾಪಟ್ಟಿ ಪರಿಷ್ಕರಣೆಯ ಭರವಸೆ ನೀಡಿದರು. ಮೊಸಳೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಗರದ ಮಿನಿ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.