ಕ್ರೀಡೆ ಸುದ್ದಿ

ವಿಶ್ವ ಚಾಂಪಿಯನ್ಸ್ ಫೈನಲ್ ಗೆ ಈ ಎರಡು ತಂಡ ಫಿಕ್ಸ್! ಪಾಕ್ ಗೆ ನಿರಾಸೆ ಸಾಧ್ಯತೆ!

Share It

ಲಂಡನ್ : ಈ ಬಾರಿಯ ವಿಶ್ವ ಚಾಂಪಿಯನ್ಸ್ ಪಟ್ಟಕ್ಕೆ ೮ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯಲಿದೆ. ಅದರಲ್ಲೂ ಕ್ರಿಕೆಟ್ ಪ್ರೇಮಿಗಳು ಹಾಗೂ ಹಿರಿಯ ಆಟಗಾರರು ಈ ತಂಡಗಳು ಪೈನಲ್ ತಲುಪಲಿವೆ ಎಂಬ ಲೆಕ್ಕಾಚಾರವನ್ನು ಹಾಕತೊಡಗಿದ್ದಾರೆ.

ಅವರಲ್ಲಿ ಮುಖ್ಯವಾಗಿ ಇಂಗ್ಲೆಂಡ್ ನ ಮಾಜಿ ಕ್ಯಾಪ್ಟನ್ ಈ ತಂಡಗಳು ಪೈನಲ್ ತಲುಪಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಆ ತಂಡಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಸದ್ಯ ಈ ಬಾರಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಆದರೆ ಭಾರತದ ಎಲ್ಲ ಪಂದ್ಯಗಳು ದುಬೈ ನಲ್ಲಿ ನಡೆಯಲಿವೆ.

ಭಾರತ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ನಾಸಿರ್ ಹುಸೇನ್ ಈ ಎರಡು ತಂಡಗಳು ಫೈನಲ್ ಪ್ರವೇಶಿಸುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಹೌದು ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಜನರು ಇದೆ ಉತ್ತರವನ್ನು ನೀಡಿದ್ದಾರೆ.

ಹುಸೇನ್ ನವರು ಹೇಳುವಂತೆ 2023 ರ ವಿಶ್ವ ಕಪ್ ನಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧದ ಫೈನಲ್ ಆಡಿತ್ತು. ಈ ಬಾರಿ ಕೂಡ ಈ ಎರಡು ತಂಡಗಳೇ ಫೈನಲ್ ನಲ್ಲಿ ಮುಖಾಮುಖಿ ಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಉಳಿದ ತಂಡಗಳು ಎಂದು ಕಳಪೆ ಎಂದು ಹೇಳುತ್ತಿಲ್ಲ. ಪ್ರಯತ್ನ ಪಟ್ಟರೆ ಸಾದ್ಯ ಎಂದು ಹೇಳಿದ್ದಾರೆ.

ಅದೇನೇ ಆಗಲಿ ಭಾರತೀಯ ಕ್ರಿಕೆಟಿನ ಅಭಿಮಾನಿಗಳಿಗೆ ಈ 2023 ವಿಶ್ವಕಪ್ ನಿರಾಶೆಯನ್ನು ಚಾಂಪಿಯನ್ಸ್ ಟ್ರೋಫಿ ನೀಗಿಸಬೇಕು ಎಂದು ಕಾಯುತ್ತಿದ್ದಾರೆ. ಪಂದ್ಯಗಳು ಆರಂಭವಾದಾಗ ಈ ಪ್ರಶ್ನೆಗೆ ಉತ್ತರ ಸಿಗಲಿದೆ.


Share It

You cannot copy content of this page