ಬಹು ನಿರೀಕ್ಷಿತ 2025 ರ ಚಾಂಪಿಯನ್ ಟ್ರೋಫಿಯನ್ನು ಗೆಲ್ಲಲು ಭಾರತ ತಂಡ ತಯಾರಿಯನ್ನು ನಡೆಸುತ್ತಿದೆ. ಆದರೆ ಭಾರತದ ಬೌಲಿಂಗ್ ಲೈನ್ ಆಫ್ ನ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಇನ್ನು ಫಿಟ್ ಆಗದೆ ಇರುವುದು ತಂಡಕ್ಕೆ ಸಮಸ್ಯೆಯಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಬೆನ್ನು ನೋವಿನಿಂದ ಹೊರ ಹೋಗಿದ್ದೆ ಜಸ್ಪ್ರೀತ್ ಬುಮ್ರಾ ಇನ್ನು ಫಿಟ್ ಆಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಭಾರತದಲ್ಲಿ ನಡೆಯು ಇಂಗ್ಲೆಂಡ್ ವಿರುದ್ಧದ ಸರಣಿಯ ಜಸ್ಪ್ರೀತ್ ಬುಮ್ರಾ ಹೊರಗೆ ಉಳಿದಿದ್ದಾರೆ.
ಜಸ್ಪ್ರೀತ್ ಬುಮ್ರಾ ಚಾಂಪಿಯನ್ ಟ್ರೋಫಿಯನ್ನು ಅಡದಿದ್ದಾರೆ ಪಾಕಿಸ್ತಾನಕ್ಕೆ ಇದರಿಂದ ಲಾಭವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ಹೇಳಿದ್ದಾರೆ. ಒಟ್ಟಾರೆ ಜಸ್ಪ್ರೀತ್ ಬುಮ್ರಾನನ್ನು ಎದುರಿಸಲು ಎಲ್ಲ ಬ್ಯಾಟರ್ ಗಳು ಕಷ್ಟಪಡುತ್ತಾರೆ ಎಂಬುದು ವಿಶ್ವಕ್ಕೆ ತಿಳಿದಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತವು ಕೈ ಚೆಲ್ಲಿದರೂ ಜಸ್ಪ್ರೀತ್ ಬುಮ್ರಾ ತಮ್ಮ ಉತ್ತಮ ಬೌಲಿಂಗ್ ಪ್ರದರ್ಶನದಿಂದ 35 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪಂದ್ಯದಲ್ಲಿ ಹೆಚ್ಚು ವಿಕೆಟ್ ಪಡೆದ ಪ್ರಶಸ್ತಿಗೆ ಭಾಜನರಾದರು.