ಕಾನ್ಪುರ: ‘ನಮ್ಮ ಅಪ್ಪ ನನ್ನನ್ನೂ ಬೆಂಕಿ ಹಚ್ಚಿ ಕೊಲ್ಲುತ್ತಾನೆ’ ಎಂಬ ಮಗುವಿನ ಹೇಳಿಕೆ ಒಬ್ಬ ವ್ಯಕ್ತಿಯ ಅಮಾನವೀಯ ಮುಖದ ಅನಾವರಣವನ್ನೇ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಇಲ್ಲಿನ ಜಾಜ್ಮಾ ಕೆಡಿಎ ಕಾಲೋನಿಯ ಚರ್ಮದ ವ್ಯಾಪಾರಿಯೊಬ್ಬರನ್ನು ಪೊಲೀಸರು, ಆತನ ಎರಡೂವರೆ ವರ್ಷದ ಮಗನೇ ನುಡಿದ ಸಾಕ್ಷಿಯ ಅನ್ವಯ ಪೊಲೀಸರು ಬಂಧಿಸಿದ್ದಾರೆ. ಆತ ಬೆಂಕಿ ಹಚ್ಚಿ ತನ್ನ ಪತ್ನಿಯನ್ನು ಕೊಲ್ಲುವ ಯತ್ನ ನಡೆಸಿದ್ದ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
2020 ರಲ್ಲಿ ವಿವಾಹವಾಗಿದ್ದ ದಂಪತಿಗಳ ನಡುವೆ ವರದಕ್ಷಿಣೆ ವಿಚಾರದಲ್ಲಿ ಆಗಾಗ ಜಗಳವಾಗುತ್ತಿತ್ತು. ಜ.೨೯ರಂದು ಪತ್ನಿ ಆತನ ಮನೆಯಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಂಡುಬAದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.
ಸೊಳ್ಳೆ ನಿವಾರಕ ಅಗರ್‌ಬತ್ತಿ ಹೊತ್ತಿಸಿದ್ದಾಗ ಬೆಂಕಿ ತಗುಲಿ, ಮನೆಗೆ ಬೆಂಕಿ ಹಚ್ಚಿಕೊಂಡಿದ್ದು, ಅದರಲ್ಲಿ ಸಿಲುಕಿದ್ದ ಪತ್ನಿ ಗಾಯಗೊಂಡಿದ್ದಾರೆ ಎಂದು ಬಿಂಬಿಸಿದ್ದರು. ಅದೇ ರೀತಿ ಹೇಳಿಕೆ ನೀಡುವಂತೆ ಮಹಿಳೆಗೆ ಗಂಡ ಹಾಗೂ ಅತ್ತೆ ಮಾವ ಬೆದರಿಸಿದ್ದರು.
ಕುಟುಂಬಸ್ಥರ ಒತ್ತಡಕ್ಕೆ ಮಣಿದ ಮಹಿಳೆ, ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಅದೇ ರೀತಿ ಹೇಳಿಕೆ ನೀಡಿದ್ದರು. ಆದರೆ, ಆಕೆಗೆ ಹೀಗೆ ಹೇಳಿಕೆ ನೀಡುವಂತೆ ಬೆದರಿಸಿದ್ದಲ್ಲದೆ, ಹೀಗೆ ಹೇಳಿಕೆ ನೀಡದಿದ್ದರೆ ತನ್ನ ಮಗುವನ್ನು ಕೊಲ್ಲುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ದಂಪತಿಯ ಎರಡೂವರೆ ವರ್ಷದ ಮಗುವನ್ನು ಪೊಲೀಸರು ಮಾತನಾಡಿಸಿದಾಗ, ಈ ಕುಟುಂಬದ ಕೃತ್ಯ ಬಯಲಾಗಿದೆ. ಮಗು ನನ್ನಪ್ಪ ನನ್ನನ್ನು ಬೆಂಕಿ ಹಚ್ಚಿ ಕೊಲ್ಲುತ್ತಾರೆ. ಅಮ್ಮನನ್ನು ಸುಟ್ಟಂತೆಯೇ ಎಂದು ಹೇಳಿತ್ತು. ಇದರ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಈ ಇಡೀ ಕೃತ್ಯದ ಹಿಂದೆ ಪತಿ ಹಾಗೂ ಆತನ ಕುಟುಂಬ ಇರುವುದು ಗೊತ್ತಾಗಿದೆ.
ಇದೀಗ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು, ಪತಿ ಸಏರಿದಂತೆ ಇಡೀ ಕುಟುಂಬವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ.
