ಬೆಂಗಳೂರು: ಚಿತ್ರದುರ್ಗದ ಶ್ರೀ ಮುರಘಾರಾಜೇಂದ್ರ ಮಠದ ಸ್ವಾಮೀಜಿ ಮೇಲೆ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಯಲಿದ್ದು, ಮುರುಘಾಶ್ರೀಗಳ ಭವಿಷ್ಯ ನಿರ್ಧಾರವಾಗಲಿದ
ಚಿತ್ರದುರ್ಗದ 2 ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಮುರಘಾಶ್ರೀ ಪರ ವಕೀಲ ಸಿ.ವಿ.ನಾಗೇಶ್ ಅವರಿಂದ ಪಾಟೀ ಸವಾಲು ಆರಂಭವಾಗಲಿದೆ. ಈಗಾಗಲೇ ಪೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಿರುವ ಪೊಲೀಸರು., ಅವರನ್ನು ಜೈಲಿನಲ್ಲಿಟ್ಟಿದ್ದಾರೆ.
ಪ್ರಕರಣದಲ್ಲಿ ಮುರುಘಾ ಶ್ರೀಗಳ ಪಾತ್ರವಿಲ್ಲ ಎಂದು ಸಆಭಿತು ಪಡಿಸಲು ಮುರುಘಾ ಶ್ರೀ ಪರ ವಕೀಲ ಸಿ.ವಿ ನಾಗೇಶ್ ಪಾಟೀ ಸವಾಲು ನಡೆಸಲಿದ್ದಾರೆ. ಪ್ರಕರಣದಲ್ಲಿ ಮುರುಘಾ ಶ್ರೀಗಳ ಪಾತ್ರವೇನು ಎಂಬುದು ಈ ಪಾಟೀ ಸವಾಲಿನಿಂದ ಸಾಭೀತಾಗಲಿದೆ.