ಹಾವೇರಿ: ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ. ಶವಸಂಸ್ಕಾರಕ್ಕೆAದು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾಗ, ಇದ್ದಕ್ಕಿದ್ದಂತೆ ವ್ಯಕ್ತಿ ಜೀವಂತಗೊAಡಿರುವ ವಿಸ್ಮಯಕಾರಿ ಘಟನೆ ಇದಾಗಿದೆ.
ಹಾವೇರಿ ಜಿಲ್ಲೆಯ ಬಂಕಾಪುರದ ಮಂಜುನಾಥ ನಗರದ 45 ವರ್ಷದ ನಿವಾಸಿ ಬಿಷ್ಟಪ್ಪ ಅಶೋಕ್ ಗುಡಿಮನಿ(ಮಾಸ್ತರ್) ಎಂಬ ವ್ಯಕ್ತಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿ, ಶವವನ್ನು ಮನೆಗೆ ಕಳುಹಿಸಿದ್ದರು.
ಆಂಬ್ಯುಲೆನ್ಸ್ನಲ್ಲಿ ಶವವನ್ನು ಗ್ರಾಮಕ್ಕೆ ತರುವ ವ್ಯವಸ್ಥೆ ಮಾಡಲಾಗಿದ್ದು, ಇನ್ನೇನು ಗ್ರಾಮದ ಹತ್ತಿರ ಬರುವಾಗ ಅಂಬ್ಯುಲೆನ್ಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅಷ್ಟರಲ್ಲಾಗಲೇ, ಆ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಎಲ್ಲ ಸಿದ್ಧತೆ ನಡೆದಿತ್ತು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಶ್ರದ್ಧಾಂಜಲಿಯ ಪೋಸ್ಟರ್‌ಗಳು ಹರಿದಾಡಿದ್ದವು. ನೆಂಟರಿಷ್ಟರೆಲ್ಲ ಆಗಮಿಸಿ, ಶವಸಂಸ್ಕಾರಕ್ಕೆ ಕಾಯುತ್ತಿದ್ದರು.
ಆದರೆ, ಅಂಬ್ಯುಲೆನ್ಸ್ನಲ್ಲಿದ್ದ ವ್ಯಕ್ತಿ ಉಸಿರಾಟ ನಡೆಸುತ್ತಿರುವುದನ್ನು ಅವರ ಪತ್ನಿ ಶೀಲಾ ಗುರುತಿಸಿದರು. ತಕ್ಷಣವೇ ಅವರನ್ನು ಶಿಗ್ಗಾವಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ವ್ಯಕ್ತಿ ಬದುಕಿರುವುದನ್ನು ದೃಢಪಡಿಸಿ, ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಕರೊದೊಯ್ಯುವಂತೆ ಸೂಚಿಸಿದರು.
ಇದೀಗ ಆ ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆಯ ವೈದ್ಯರು ನಿಗಾಘಟಕದಲ್ಲಿರಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ದೀರ್ಘಕಾಲದ ಯಕೃತ್ತು ಮತ್ತು ನ್ಯುಮೋನಿಯಾ ಸಮಸ್ಯೆಯಿದ್ದು, ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
ಇದೀಗ ಆ ವ್ಯಕ್ತಿಯ ಹೆಸರಿನಲ್ಲಿ ಹರಿದಾಡಿದ್ದ ರಿಪ್ ಸಂದೇಶಗಳು ಬೇಗ ಗುಣಮುಖರಾಗಿ ಬನ್ನಿ ಎಂಬ ಸಂದೇಶಗಳಾಗಿ ಬದಲಾಗಿವೆ. ಅಂತ್ಯಕ್ರಿಯೆಗೆ ಆಗಮಿಸಿದ್ದವರೆಲ್ಲ, ಬೇಗನೆ ಗುಣಮುಖರಾಗುವಂತೆ ಹಾರೈಸುವ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ.
