ಬೆಂಗಳೂರು: ಕುಡಿಯವಲು ಹಣ ನೀಡದ ಕಾರಣಕ್ಕೆ ನಿವೃತ್ತ ಯೋಧರೂ ಆದ ತಂದೆಯನ್ನೇ ಪಾಪಿ ಪುತ್ರನೊಬ್ಬ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಟರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಲಾಜಿ ಲೇಔಟ್‌ನಲ್ಲಿ ವಾಸವಿದ್ದ ಬಿಎಸ್‌ಎಫ್ ನಿವೃತ್ತ ಯೋಧ ಚೆನ್ನಬಸವಯ್ಯ ಹತ್ಯೆಯಾದವರು. ಅವರ ಪುತ್ರ 26 ವರ್ಷದ ಅಮಿತ್ ತಂದೆಯನ್ನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕುಡಿತದ ಚಟಕ್ಕೆ ಬಿದ್ದಿದ್ದ ಅಮಿತ್, ನಿತ್ಯ ಕುಡಿಯಲು ಹಣ ಕೇಳಿ ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಸುಖಾಸುಮ್ಮನೆ ಹೆತ್ತವರನ್ನು ಪೀಡಿಸುತ್ತಿದ್ದ ಅಮಿತ್, ಹಣವಿಲ್ಲದಿದ್ದರೆ ಚಿನ್ನದ ಬಳೆ, ಕಿವಿಯೋಲೆ, ಮಾಂಗಲ್ಯ ಸರವನ್ನು ಕಿತ್ತುಕೊಳ್ಳುತ್ತಿದ್ದ. ತಾಯಿಗೂ ಮನಬಂದತೆ ಥಳಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.