ವಿಜಯೇಂದ್ರ ವಿರುದ್ಧ ಮೇಲುಗೈ ಸಾಧಿಸಿದ ಕೆ. ಸುಧಾಕರ್: ಜಿಲ್ಲಾಧ್ಯಕ್ಷರ ಆಯ್ಕೆಗೆ ತಡೆ
ಬೆಂಗಳೂರು: ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್‌ಗೆ ಮೇಲುಗೈ ಆಗಿದೆ. ತಮ್ಮ ಅನುಮತಿ ಇಲ್ಲದೆ ನೇಮಕಗೊಂಡಿದ್ದ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಅನೂರ್ಜಿತಗೊಳಿಸಲುವಲ್ಲಿ ಸುಧಾಕರ್ ಯಶಸ್ವಿಯಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಪತ್ರ ಬರೆದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಂದೀಪ್ ಆಯ್ಕೆಗೆ ತಡೆ ನೀಡುವಂತೆ ಸೂಚನೆ ನೀಡಿದೆ. ಆ ಮೂಲಕ ಡಾ.ಕೆ.ಸುಧಾಕರ್ ಮೇಲುಗೈ ಸಾಧಿಸಿದ್ದಾರೆ ಎನ್ನಬಹುದು.
ಜಿಲ್ಲಾಧ್ಯಕ್ಷರಾಗಿ ಬಿ.ಸಂದೀಪ್ ಆಯ್ಕೆ ಮಾಡಿದ್ದಕ್ಕೆ ಸಂಸದ ಡಾ.ಕೆ.ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯಾಧ್ಯಕ್ಷ ವಿಜಯೇಂದ್ರ ನಡೆಯನ್ನು ಟೀಕಿಸಿದ್ದರು. ಇದೀಗ ಆ ಆಯ್ಕೆಗೆ ತಡೆ ಕೊಡಿಸುವಲ್ಲಿ ಸುಧಾಕರ್ ಸಫಲವಾಗಿದ್ದಾರೆ. ಆಯ್ಕೆಯನ್ನು ತಡೆಯುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.


