ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ಬಿಜೆಪಿ ಕಾರ್ಯಕರ್ತರ ಪತ್ರ
ಬೆಂಗಳೂರು: ಕೋಗಿಲು ಕ್ರಾಸ್ ಸಂತ್ರಸ್ತರಿಗೆ ಒಂದು ಟ್ವೀಟ್ ಮೂಲಕವೇ ಪರಿಹಾರ ಒದಗಿಸಿದ ಕೇರಳ ಸಿಎಂ ಪಿಣರಾಯಿಗೆ ಬಿಜೆಪಿ ಕಾರ್ಯಕರ್ತರು ಪತ್ರ ಬರೆದು ವ್ಯಂಗ್ಯವಾಡಿದ್ದಾರೆ.
ಕೋಗಿಲು ಕ್ರಾಸ್ ನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿದ ಸರಕಾರದ ಕ್ರಮವನ್ನು ವಿರೋಧಿಸಿ ಪಿಣರಾಯಿ ಅವರು ಒಂದು ಟ್ವೀಟ್ ಮಾಡಿದ್ದರು. ಮೊದಲಿಗೆ ಕೇರಳ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಿದ್ದ ಕರ್ನಾಟಕ ಸರಕಾರ, ನಂತರ ಅಲ್ಲಿನ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿತು.
ಈ ನಡೆಯನ್ನು ವಿರೋಧಿಸಿರುವ ಬಿಜೆಪಿ, ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸರಕಾರವನ್ನು ಟೀಕಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಕೇರಳ ಸಿಎಂಗೆ ಪತ್ರ ಬರೆದು, ನಮಗೊಂದು ಟ್ವೀಟ್ ಮಾಡುವ ಮೂಲಕ ಪರಿಹಾರ ಕಲ್ಪಿಸಿಕೊಡಿ ಎಂದು ವ್ಯಂಗ್ಯವಾಡಿದ್ದಾರೆ.


