ಸುದ್ದಿ

ದಾವಣಗೆರೆ ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ!

Share It

ದಾವಣಗೆರೆ: ಟಿ.ಬಿ ಡ್ಯಾಂ ಕ್ರಸ್ಟ್‌ ಗೇಟ್ ಕಟ್ ಆದ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 17 ರಿಂದ ರಾಜ್ಯದ ಹಲವೆಡೆ ಭಾರಿ ಮಳೆ ಸುರಿಯುತ್ತದೆ ಎಂದು ತಿಳಿಸಿದ್ದರು.

ಅದರಂತೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ನಗರದಲ್ಲಿ ಆಗಸ್ಟ್ 14 ಬೆಳಗಿನ ಜಾವ 4:45 ರಿಂದ ಆರಂಭವಾದ ಗುಡುಗು ಸಿಡಿಲು ಮಳೆ ಬೆಳಗಿನವರೆಗೂ ಬಿಡದೇ ಬರುತ್ತಲೇ ಇದೆ. ‌ಟಿ.ಬಿ ಡ್ಯಾಂ ಕ್ರಸ್ಟ್‌ ಗೇಟ್ ನಂ‌.19 ಕಟ್ ಆಗಿ ಅಪಾರ ಪ್ರಮಾಣದ ನೀರು ಹರಿದು ವ್ಯರ್ಥವಾದಾಗಲೇ ದಾವಣಗೆರೆ ಜಿಲ್ಲೆಯ ರೈತರಿಗೆ ಆತಂಕ ಶುರುವಾಯಿತು.

ಅದರಲ್ಲೂ ಟಿ.ಬಿ ಡ್ಯಾಂ ಕ್ರಸ್ಟ್‌ ಗೇಟ್ ಕಟ್ ಆದ ದಿನದಿಂದ ಈವರೆಗೆ ದಾವಣಗೆರೆ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರೀ ಬಿಸಿಲು ಆವರಿಸಿ ಮಳೆ ನಾಪತ್ತೆಯಾಗಿತ್ತು. ಇದರಿಂದ ಟಿ.ಬಿ ಡ್ಯಾಂ ನೀರೂ ಹೋಯ್ತು, ಇಲ್ಲಿ ಮಳೆಯೂ ಹೋಯ್ತು ಎಂದು ದಾವಣಗೆರೆ ಜಿಲ್ಲೆಯ ರೈತರು ತೀವ್ರ ಆತಂಕಕ್ಕೀಡಾಗಿದ್ದರು.

ಆದರೆ ತುಂಗಾ ಮತ್ತು ಭದ್ರಾ ನದಿಗಳು ಸೇರುವ ಪಕ್ಕದ ಹರಿಹರ ಬಳಿಯ ದಾವಣಗೆರೆ ನಗರದಲ್ಲಿ ಆಗಸ್ಟ್ 14 ಬುಧವಾರ ಸುಮಾರು ನಸುಕಿನ ಜಾವ 4:45 ರಿಂದ ಸತತ ಒಂದು ಗಂಟೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದು ದಾವಣಗೆರೆ ಭಾಗದ ರೈತರಿಗೆ ಸಮಾಧಾನ ತಂದಿದೆ.

ಜೊತೆಗೆ ತುಂಗಭದ್ರಾ ನದಿಯ ಒಳಹರಿವು ಆರಂಭವಾಗುವ ಕೊನೆಯ ಮುಂಗಾರು ಮಳೆ ಶುರುವಾಗಿದೆ‌. ಇದರಿಂದ ಒಂದಿಷ್ಟು ಮಳೆ ನೀರು ತುಂಗಭದ್ರಾ ನದಿಯ ಕಡೆ ಹರಿದು ಹೋಗಿದೆ‌.

ಪರಿಣಾಮ ಹೊಸಪೇಟೆ ಬಳಿಯ ಟಿ.ಬಿ ಡ್ಯಾಂಗೂ ಒಂದಿಷ್ಟು ನೀರು ಹರಿದು ಹೋಗುವ ಸಾಧ್ಯತೆ ಇದೆ.
ದಾವಣಗೆರೆ ಸುತ್ತಲೂ ಭತ್ತ, ಮೆಕ್ಕೆಜೋಳ ಸೇರಿದಂತೆ ಹಲವಾರು ಬೆಳೆ ಬೆಳೆಯುವ ರೈತರು ಕೂಡ ಈ ಮಳೆಯಿಂದ ಖುಷಿಯಾಗಿದ್ದಾರೆ.


Share It

You cannot copy content of this page