ಕಳೆದ ಬಾರಿಯ ದೇಶಿಯ ಟೂರ್ನಿಗಳಲ್ಲಿ ಭಾಗವಹಿಸದೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಆಡುವುದು ಖಚಿತ ಎನ್ನಲಾಗಿದೆ. ಬಿಸಿಸಿಐ ಸೂಚನೆ ಮೇರೆಗೂ ಕಳೆದ ಬಾರಿ ದೇಶಿಯ ಟೂರ್ನಿಗಳಲ್ಲಿ ಭಾಗವಹಿಸದೇ ಇದ್ದಿದ್ದರಿಂದ ಇವರಿಬ್ಬರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿತ್ತು.
ಈಗಾಗಲೇ ದೇಶಿಯ ತಂಡದಿಂದ ಹೊರಗಿರುವ ಇಶಾನ್ ಕಿಶನ್ ತಂಡಕ್ಕೆ ಮತ್ತೆ ಮರಳಬೇಕಾದರೆ ದುಲೀಪ್ ಟ್ರೋಫಿ ಆಡೋದು ಕಡ್ಡಾಯವಾಗಿದೆ. ಶ್ರೇಯಸ್ ಅಯ್ಯರ್ ಏಕದಿನ ತಂಡದಲ್ಲಿ ಸ್ಥಾನ ಪಡೆದರು ತಂಡಕ್ಕೆ ಮರಳಬೇಕಾದರೆ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು.
ಭಾರತದ ಅನುಭವಿ ಬ್ಯಾಟರ್ ಗಳಾದ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ದುಲೀಪ್ ಟ್ರೋಫಿಯಿಂದ ಕೈ ಬಿಡಲಾಗುವುದು ಎನ್ನಲಾಗಿದೆ. ಆಯ್ಕೆ ಸಮಿತಿಯು ಹಿರಿಯರನ್ನು ಬಿಟ್ಟು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ಯಾಟರ್ ಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ ಎಂದು ತಿಳಿದಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಎಲ್ಲಾ ಸ್ಟಾರ್ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡಲು ಸೂಚಿಸಿದೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಾಂಗ್ಲಾ ದೇಶದ ಮೇಲೆ ಇರುವ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗುವುದು ಎನ್ನಲಾಗುತ್ತಿದೆ.