ಕ್ರೀಡೆ ಸುದ್ದಿ

ಕನ್ನಡಿಗ ರಾಹುಲ್ ಗೆ ಈ ಎರಡು ತಂಡಗಳಿಂದ ಬಿಗ್ ಆಫರ್

Share It

ಕಳೆದ ಎರಡೂ ಐಪಿಎಲ್ ಸೀಸನ್ ಗಳಿಂದ ಲಕ್ನೊ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ ) ಪರ ಆಡುತ್ತಿರುವ ಕನ್ನಡಿಗ ಕೆ. ಎಲ್ ರಾಹುಲ್ ಈ ವರ್ಷ ಎಲ್ ಎಸ್ ಜಿ ತಂಡದಿಂದ ಹೊರಗೂಳಿಯುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ. ನಾಯಕನಾಗಿ ಎರಡು ವರ್ಷಗಳಲ್ಲಿ ಎಲ್ ಎಸ್ ಜಿ ತಂಡವನ್ನು ಒಂದು ಬಾರಿ ಪ್ಲೆ ಆಫ್ ಗೆ ತಲುಪಿಸಿದ್ದಾರೆ.

ಆದರೆ ಕಳೆದ ಬಾರಿ ನಾಯಕನಾಗಿ ರಾಹುಲ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡದೆ ಇರುವ ಕಾರಣದಿಂದ 2025ರ ಐಪಿಎಲ್ ಗೆ ಸಿದ್ದವಾಗಿರುವ ಮೆಗಾ ಹರಾಜಿಗೂ ಮುನ್ನವೇ ನಾಯಕ ರಾಹುಲ್ ಅನ್ನು ತಂಡದಿಂದ ಕೈ ಬಿಟ್ಟು ಹೊಸ ನಾಯಕನಿಗೆ ಹರಾಜಿನಲ್ಲಿ ಎಲ್ ಎಸ್ ಜಿ ಮಣೆಹಾಕುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತೀವೆ.

ಇನ್ನು ರಾಹುಲ್ ಅನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ನೀರೀಕ್ಷೆಯಲ್ಲಿರುವ ಆ ಎರಡು ತಂಡಗಳು ಯಾವುವು ಎಂದರೆ, ಮೊದಲನೆಯದು ಡೆಲ್ಲಿ ಕ್ಯಾಪಿಟಲ್ಸ್ . ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ಈ ಬಾರಿ ತಂಡದಿಂದ ಹೊರಗುಳಿಸಿ ಹೊಸ ನಾಯಕನನ್ನು ಹುಡುಕುವ ತವಕದಲ್ಲಿದೆ. ಡಿ ಸಿ ಹರಾಜಿಗೆ ಶಾರ್ಟ್ ಲಿಸ್ಟ್ ಮಾಡಿಕೊಂಡಿರುವ ಪಟ್ಟಿಯಲ್ಲಿ ಕೆ ಎಲ್ ರಾಹುಲ್ ಮೊದಲಿಗರು ಎಂಬ ವದಂತಿಗಳು ಕೇಳಿ ಬರುತ್ತೀವೆ.

ಇನ್ನು ಎರಡನೆಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್ ಸಿಬಿ ಫಾಫ್ ಡುಪ್ಲೆಸಿಸ್ ಅವರನ್ನು ಹಾರಾಜಿನಲ್ಲಿ ಕೈ ಬಿಟ್ಟರೆ ರಾಹುಲ್ ಅವರನ್ನು ಮತ್ತೆ ತನ್ನ ತಂಡಕ್ಕೆ ಹಿಂತಿರುಗಿ ಕರೆಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತೀವೆ. ಮುಂಬರುವ ಐಪಿಎಲ್ ಅವ್ರುತ್ತಿಯಲ್ಲಿ ರಾಹುಲ್ ಯಾವ ತಂಡದಲ್ಲಿ ಆಡುತ್ತಾರೆ ಎಂದು ಕಾದು ನೋಡಬೇಕಿದೆ.


Share It

You cannot copy content of this page