ಕ್ರೀಡೆ ಸುದ್ದಿ

ಈ ಬಾರಿಯ ದುಲೀಪ್ ಟ್ರೋಫಿಗೆ ಸ್ಟಾರ್ ಆಟಗಾರರ ದಂಡು

Share It

ದುಲೀಪ್ ಟ್ರೋಫಿಯು ಸೆ 05 ರಿಂದ 22ರವರೆಗೆ ನಡೆಯಲಿದೆ. ಮೊದಲ ಸುತ್ತಿನ ಎರಡು ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಆನಂತಪುರದಿಂದ ಬೆಂಗಳೂರಿನ ಎಮ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವರ್ಗಾಯಿಸಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಎಲ್ಲ ಸ್ಟಾರ್ ಆಟಗಾರರು ಭಾಗವಹಿಸಲು ಸೂಚಿಸಿದೆ. ಕನ್ನಡಿಗ ಕೆಎಲ್ ರಾಹುಲ್, ಟೀಮ್ ಇಂಡಿಯಾ ಉಪನಾಯಕ ಶುಭಮಾನ್ ಗಿಲ್, ಆಲ್ ರೌಂಡರ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಪಂತ್‌ ಸೇರಿ ಬಹುತೇಕ ಅಂತಾರಾಷ್ಟ್ರೀಯ ಆಟಗಾರರು ಟೂರ್ನಿಯ ಮೊದಲ ಸುತ್ತು ಅಥವಾ ಸಂಪೂರ್ಣ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ದುಲೀಪ್ ಟ್ರೋಫಿ ಪ್ರದರ್ಶನದ ಆಧಾರದ ಮೇಲೆ ಬಾಂಗ್ಲಾ ದೇಶದ ಟೆಸ್ಟ್ ತಂಡ ಆಯ್ಕೆ ಎನಿಸಿದೆ.
ಇದರ ಹೊರತಾಗಿಯೂ ವೇಗಿ ಜಸ್‌ಪ್ರೀತ್ ಬುಮ್ರಾಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ.

ಭಾರತ ತಂಡದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮ ದೇಶೀಯ ಟೂರ್ನಿಗಳನ್ನು 2021ರಲ್ಲಿ ಕೊನೆಯದಾಗಿ ಆಡಿದ್ದರು ಮತ್ತು ವಿರಾಟ್ ಕೊಹ್ಲಿ ದೇಸೀಯ ಟೂರ್ನಿಗಳಲ್ಲಿ ಭಾಗವಹಿಸಿ 9 ವರ್ಷಗಳೇ ಕಳೆದು ಹೋಗಿವೆ. ಆದ್ದರಿಂದ ಈ ಬಾರಿಯ ದುಲೀಪ್ ಟ್ರೋಪಿಯಲ್ಲಿ ಭಾಗವಹಿಸಲು ಬಿಸಿಸಿಐ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಗೆ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಅವರಿಗೆ ಬಿಟ್ಟಿದೆ.


Share It

You cannot copy content of this page