ಕಾರ್ತಿಕ ಶನಿವಾರದ ಎಫೆಕ್ಟ್ : ಸಾಸಲು ಕ್ಷೇತ್ರದ ರಸ್ತೆಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್

Share It

ಶ್ರವಣಬೆಳಗೊಳ: ಕಾರ್ತಿಕ ಶನಿವಾರದ ಕಾರಣಕ್ಕೆ ಶ್ರೀ ಸಾಸಲು ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಾಸಲು ಗ್ರಾಮಕ್ಕೆ ತೆರಳುವ ಶ್ರವಣಬೆಳಗೊಳ- ಕಿಕ್ಕೇರಿ ರಸ್ತೆಯಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು.

ಸಾಸಲು ಕ್ಷೇತ್ರವೂ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಅಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಸುತ್ತಲಿನ ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಗಮಿಸಿ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ.

ಸಾಸಲು ಕ್ಷೇತ್ರವು ಸರ್ಪದೋಷ ನಿವಾರಣೆಗೆ ಅತ್ಯಂತ ಪ್ರಸಿದ್ಧ ತಾಣವಾದ ಕಾರಣಕ್ಕೆ ಕಾರ್ತಿಕ ಮಾಸದ ಶನಿವಾರ ಮತ್ತು ಸೋಮವಾರ ಸಾವಿರಾರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಾರೆ. ಹೀಗಾಗಿ, ಶನಿವಾರ ಶ್ರವಣಬೆಳಗೊಳ ಮೂಲಕ ಸಾಸಲಿಗೆ ಆಗಮಿಸುಚ ರಸ್ತೆಯಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.

ವರದಿ: ಮಂಜುನಾಥ್ ಸಿಂಗ್, ಶ್ರವಣಬೆಳಗೊಳ


Share It
Previous post

ಎಲ್ಲೆಂದರಲ್ಲಿ ಕಸ ಹಾಕೋ ಸಮಸ್ಯೆ ನಿವಾರಣೆಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

Next post

ಮುಂಬೈ ಕರ್ನಾಟಕಕ್ಕೆ ಸೇರಿಸಬೇಕು ಎಂಬ ಹೋರಾಟ ಶುರು ಮಾಡುವ ಎಚ್ಚರಿಕೆ ನೀಡಿದ ಲಕ್ಷ್ಮಣ್ ಸವದಿ

You May Have Missed

You cannot copy content of this page