ಹುಬ್ಬಳ್ಳಿ ಮರ್ಯಾದೆಗೇಡು ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಎಚ್.ಸಿ.ಮಹದೇವಪ್ಪ ಸಾಂತ್ವನ: 16 ಲಕ್ಷ ರು. ಪರಿಹಾರ ವಿತರಣೆ
ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ತಂದೆಯಿಂದಲೇ ಹತ್ಯೆಗೀಡಾದ ಗರ್ಭಿನಿ ಮಾನ್ಯಾ ಪಾಟೀಲ್ ಪತಿಯ ಕುಟುಂಬಸ್ಥರಿಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಾಂತ್ವನ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಮೃತ ಮಾನ್ಯಾಳ ಪತಿ ವಿವೇಕಾನಂದ ದೊಡ್ಮನಿ ಕುಟುಂಭಕ್ಕೆ ಸಾಂತ್ವನ ಹೇಳಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಮಹದೇವಪ್ಪ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವರು, ವಿವೇಕಾನಂದ ದೊಡ್ಮನಿ ಕುಟುಂಬಕ್ಕೆ 16 ಲಕ್ಷ ರು ಪರಿಹಾರದ ಚೆಕ್ ವಿತರಣೆ ಮಾಡಿದರು. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಐದು ಲಕ್ಷ ರು. ಪರಿಹಾರ ನೀಡಲಾಗಿತ್ತು. ಇದೀಗ 16 ಲಕ್ಷ ರು. ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ.
ಸಚಿವ ಮಹದೇವಪ್ಪ ಅವರ ಜತೆಗೆ, ಹುಬ್ಬಳ್ಳಿ ದಕ್ಷಿಣ ಶಾಸಕ ಪ್ರಸಾದ್ ಅಬ್ಬಯ್ಯ, ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಸಮಾಜಕಲ್ಯಾಣ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್ ಸೇರಿ ಹಲವು ನಾಯಕರು, ದಲಿತ ಮುಖಂಡರು ಉಪಸ್ಥಿತರಿದ್ದರು. ಗ್ರಾಮಕ್ಕೆ ಹೋಗಲು ಹೆದರಿದ್ದ ವಿವೇಕಾನಂದ ಕುಟುಂಬಕ್ಕೆ ಸಚಿವರು ಧೈರ್ಯ ಹೇಳಿದರು.
Updating….


