ಅಪರಾಧ ಸುದ್ದಿ

ಕೋಲಾರ: ಮಾನಸಿಕ ಅಸ್ವಸ್ಥೆಯ ಕೊಂದು ಶವದ ಅತ್ಯಾಚಾರ ನಡೆಸಿದ ವಿಕೃತಕಾಮಿ

Share It

ಕೋಲಾರ: ಮಾನಸಿಕ ಅಸ್ವಸ್ಥೆಯೊಬ್ಬರನ್ನು ಕೊಂದು ನಂತರ ಶವದೊಂದಿಗೆ ಸಂಭೋಗ ನಡೆಸಿದ ವ್ಯಕ್ತಿಯೊಬ್ಬನನ್ನು ಮುಳುಬಾಗಿಲು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಳುಬಾಗಿಲು ನಗರದ ಪಳ್ಳಿಗರ ಪಾಳ್ಯದ ಮೈಕ್ ಶಂಕರ್ ಎಂಬುವವರ ಪತ್ನಿ ಮಾನಸಿಕವಾಗಿ ಹಲವಾರು ವರ್ಷಗಳಿಂದ ನರಳುತ್ತಿದ್ದರು. ಆದರೆ, ಸೆ.೨೫ ರಂದು ಆಕೆ ಶವವಾಗಿ ಪತ್ತೆಯಾಗಿದ್ದರು. ಅನುಮಾನಸ್ಪದ ಸಾವಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆಯ ಗಂಡನನ್ನೇ ಮೊದಲಿಗೆ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ಆತ ಹಲವಾರು ವರ್ಷಗಳಿಂದ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೂ, ಆಕೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿತ್ತು. ಹೀಗಾಗಿ, ಪೊಲೀಸರು ಬೇರೆ ಆಯಾಮದಲ್ಲಿ ತನಿಖೆ ಆರಂಭಿಸಿದ್ದರು.

ತನಿಖೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷö್ಯ ನುಡಿದಿದ್ದವು. ಘಟನೆ ನಡೆದ ಸ್ಥಳದಲ್ಲಿ ನಡುರಾತ್ರಿ ಆಟೋವೊಂದು ಓಡಾಡಿದ ದೃಶ್ಯ ಕಂಡುಬAದಿತ್ತು. ಅದರ ಆಧಾರದಲ್ಲಿ ಹೈದರಿ ನಗರದ ಸಯ್ಯದ್ ಸುಹೇಲ್ ಎಂಬಾತನ ಮೇಲೆ ಅನುಮಾನ ಮೂಡಿತ್ತು. ಆದರೆ, ಅಷ್ಟರಲ್ಲಿ ಆತನ ಎಸ್ಕೇಪ್ ಆಗಿದ್ದ.

ಅನುಮಾನಗೊಂಡು, ಆತನ ಬೆನ್ನಟ್ಟಿದ್ದ ಪೊಲೀಸರಿಗೆ ಆತನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಎಂಬಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿ, ಪೊಲೀಸರಿಗೆ ಆಘಾತಕಾರಿ ವಿಷಯವೊಂದು ಗೊತ್ತಾಗಿದೆ. ಆಕೆಯನ್ನು ಕೊಲೆ ಮಾಡಿ ಶವದ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ.

ಘಟನೆಯ ವಿವರ: ಸೆ೨೪ರ ರಾತ್ರಿ ಎಪಿಎಂಸಿ ಬಳಿ ಕುಳಿತಿದ್ದ ಮಾನಸಿಕ ಅಸ್ವಸ್ಥೆ ಸುಶೀಲಮ್ಮ ಎಂಬಾಕೆಯನ್ನು ಸುಹೇಲ್ ಆಟೋದಲ್ಲಿ ಮನೆಗೆ ಬಿಡುವುದಾಗಿ ಕರೆದಿದ್ದಾನೆ. ಪಳ್ಳಿಗರ ಪಾಳ್ಯದ ಕಡೆಗೆ ಹೋಗದೆ ಬೇರೆಡೆ ಹೋಗುವುದನ್ನು ಗಮನಿಸಿದ ಆಕೆ ಕಿರುಚಿ ಕೆಳಗಿಳಿದಾಗ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಆಟೋದಲ್ಲಿ ಹಾಕಿಕೊಂಡು ಹೋಗಿ ಅತ್ಯಾಚಾರ ನಡೆಸಿ ಕೊನೆಗೆ ಹೈದರ್ ನಗರದ ಹೊರವಲಯದಲ್ಲಿ ಬಿಸಾಡಿ ಪರಾರಿಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.


Share It

You cannot copy content of this page