ಬೆಂಗಳೂರು: ಸದಾ ತಮ್ಮ ಕೂದಲಿನ ಬಗ್ಗೆಯೇ ಚರ್ಚೆ ಮಾಡೋ ಬಿಜೆಪಿ ನಾಯಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೌಂಟರ್ ಕೊಟ್ಟಿದ್ದು, ಬಿಜೆಪಿಗರ ಅಭಿವೃದ್ಧಿ ಬಗ್ಗೆ ಚಿಂತಿಸುವುದು ಬಿಟ್ಟು, ಅವರಿವರ ಕೂದಲು, ಗಡ್ಡದ ಬಗ್ಗೆಯೇ ಚಿಂತನೆ ಮಾಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗರು, ತಮ್ಮ ಸರಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಎಲ್ಲಿಯೂ ಮಾತನಾಡಲೇ ಇಲ್ಲ. ಮಾತೆತ್ತಿದರೆ, ಡಿ.ಕೆ.ಶಿವಕುಮಾರ್ ಗಡ್ಡ ಬಿಟ್ಟಿದ್ದಾರೆ ಎಂಬುದೇ ಅವರ ಚುನಾವಣೆಯ ವಿಷಯವಾಗಿತ್ತು. ಅದಕ್ಕಾಗಿಯೇ ಅವರು ೬೦ಕ್ಕೆ ಇಳಿದರು ಎಂದು ಟೀಕಿಸಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರು ಯಾವಾಗಲೂ ನನ್ನ ಕೂದಲಿನ ಬಗ್ಗೆಯೇ ಟೀಕೆ ಮಾಡ್ತಾರೆ. ಅದರಿಂದ ಅವರಿಗೆ ಅದೇನು ಪ್ರಯೋಜನ ಇದೆಯೋ ಗೊತ್ತಿಲ್ಲ, ಮಾತನಾಡಲು, ಚರ್ಚೆ ಮಾಡಲು ಸಾಕಷ್ಟು ವಿಚಾರಗಳಿವೆ. ಅದೆಲ್ಲವನ್ನು ಬಿಟ್ಟು ಅದ್ಯಾಕೆ ನನ್ನ ಕೂದಲಿನ ವಿಷಯಕ್ಕೆ ಅವರು ರ‍್ತಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಗಡ್ಡದ ಮಾತನಾಡಿ, 60 ಕ್ಕೆ ಬಂದಿದ್ದರು, ಈಗ ನನ್ನ ಕೂದಲಿನ ಬಗ್ಗೆ ಮಾತಾಡಿ, 26 ರಿಂದ 6 ಕ್ಕೆ ಇಳಿಯುತ್ತಾರೆ. ಅಬ್ದುಲ್ ಕಲಾಂ ಅವರ ಹೇರ್ ಸ್ಟೆöÊಲ್ ಬಗ್ಗೆ ಬಿಜೆಪಿಯವರು ಮಾತನ್ನಾಡಿದ್ದರಾ? ಈ ಬೇಡವಾದ ಕೂದಲು ವಿಚಾರವನ್ನೆಲ್ಲ ಯಾಕೆ ಮಾತಾಡ್ತಾರೆ ಎಂದು ಕುಟುಕಿದ್ದಾರೆ.
