ಉಪಯುಕ್ತ ಸುದ್ದಿ

ಒಂದೇ ದಿನ 600 ಪ್ರಕರಣಗಳ ವಿಚಾರಣೆ ನಡೆಸಲಿರುವ ನ್ಯಾ. ಎಂ.ನಾಗಪ್ರಸನ್ನ

Share It

ಬೆಂಗಳೂರು: ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿರುವ ಹೈಕೋರ್ಟ್ ಏಕಸದಸ್ಯ ಪೀಠ ಇಂದು (ಜೂನ್ 18) ದಾಖಲೆಯ 600 ಅರ್ಜಿಗಳ ವಿಚಾರಣೆ ನಡೆಸಲಿದೆ.

ಹೈಕೋರ್ಟ್ ನ ಕೋರ್ಟ್ ಹಾಲ್ 19ರ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ಎಂ‌. ನಾಗಪ್ರಸನ್ನ ಅವರು, ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಪಟ್ಟಿಯಾಗುವಂತಹ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ಇಂದಿನ ಕೋರ್ಟ್ ಹಾಲ್ 19ರ ಜೂನ್ 18ರ ಕಾಸ್ ಲಿಸ್ಟ್ 53 ಪುಟಗಳಷ್ಟಿದ್ದು, ಇವುಗಳಲ್ಲಿ 257 ಹೊಸ ಅರ್ಜಿಗಳಿವೆ.

ಇತ್ತೀಚಿನ ದಿನಗಳಲ್ಲಿ ಅಧಿಕ ಪ್ರಕರಣಗಳ ವಿಚಾರಣೆ ನಡೆಸಿ, ಅರ್ಜಿಗಳ ತ್ವರಿತ ವಿಲೇವಾರಿ ಮಾಡುವ ಮೂಲಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ. (Lawtime.in)


Share It

You cannot copy content of this page