ಶಿವಮೊಗ್ಗ: ವಿನೋಬನಗರ ಹುಡ್ಕೋ ಕಾಲೋನಿಯ ಶ್ರೀ ಪ್ರಿಯದರ್ಶಿನಿ ಪ್ರೌಢಶಾಲೆಯ ಹತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾದ ವರುಣ್ ಎಂ.ವೈ. ಗೆ ಉತ್ತಮ ಫಲಿತಾಂಶ ಲಭಿಸಿರುವುದು ಹಿರಿಮೆಯ ಸಂಗತಿ.
ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯ ಪಲಿತಾಂಶ ದಲ್ಲಿ ಈ ಪ್ರತಿಭೆಯು 595 ಅಂಕ ಗಳಿಸಿದ್ದು, ವಿಜ್ಞಾನ ವಿಷಯದಲ್ಲಿ 87 ಅಂಕಗಳು ಬಂದಿದ್ದು, ನಂತರ ಮರು ಮೌಲ್ಯ ಮಾಪನದಲ್ಲಿ 3 ಅಂಕಗಳು ಲಭಿಸಿದೆ. ಸಮಾಜ ವಿಜ್ಞಾನ ವಿಷಯದಲ್ಲಿ 90 ಅಂಕ ಬಂದಿದ್ದು ನಂತರ ಮರು ಮೌಲ್ಯ ಮಾಪನದಲ್ಲಿ 5 ಅಂಕ ಪಡೆಯುವ ಮೂಲಕ 625 ಕ್ಕೆ 603 ಅಂಕಗಳನ್ನು ಗಳಿಸಿ,ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು,ಉತ್ತಮ ಸಾಧನೆ ಮಾಡಿದ್ದಾರೆ.
ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಯೋಗೇಶ್ ಮತ್ತು ನೇತ್ರಾವತಿ ದಂಪತಿಗಳ ಪುತ್ರ ರಾಗಿರುತ್ತಾನೆ. ವಿದ್ಯಾರ್ಥಿಯ ಸಾಧನೆಗೆ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾ. ಹ. ತಿಮ್ಮೇನಹಳ್ಳಿ ಹಾಗೂ ಸದಸ್ಯರು ಅಭಿನಂದಿಸುತ್ತಾರೆ.

