ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ಒಂದಾದ ಚಾಂಪಿಯನ್ ಟ್ರೋಫಿ 2025 ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿಯ ಚಾಂಪಿಯನ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಅಲ್ಲಿನ ಎಲ್ಲಾ ಪಂದ್ಯಗಳು ದುಬೈ ಗೆ ಶಿಫ್ಟ್ ಆಗುವ ಸಾಧ್ಯತೆ ಕಾಣುತ್ತಿದೆ.
ಹೌದು ಪಾಕಿಸ್ತಾನವು ಚಾಂಪಿಯನ್ ಟ್ರೋಫಿಗೆ ಮುಖ್ಯವಾಗಿ ಮೂರು ಕ್ರೀಡಾಂಗಣಗಳು ಸಿದ್ಧಪಡಿಸುತ್ತಿದೆ. ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿ, ಇವುಗಳಲ್ಲಿ ಇನ್ನು ಹಲವು ಕಾಮಗಾರಿಗಳು ನಡೆಯುತ್ತಿವೆ. ಫೆಬ್ರವರಿ 19 ರಿಂದ ಆರಂಭವಾಗುವ ಈ ಟೂರ್ನಿಗೆ ಕೇವಲ 40 ದಿನಗಳು ಮಾತ್ರ ಬಾಕಿ ಇದೆ. ಈ ಅವಧಿಯಲ್ಲಿ ಕನಿಷ್ಠ ಕೆಲಸಗಳು ಇನ್ನು ಪೂರ್ಣಗೊಂಡಿಲ್ಲ ಎಂದು ವರದಿಯಾಗಿದೆ.
ಭಾರತ ಹೈಬ್ರಿಡ್ ಮಾದರಿಯಲ್ಲಿ ಪದ್ಯಗಳನ್ನು ದುಬೈ ನಲ್ಲಿ ನಡೆಸಲಾಗುವುದು ಎಂದು ಈಗಾಗಲೇ ಐಸಿಸಿ ದೃಢಪಡಿಸಿದೆ. ಈ ನಡುವೆ ಟೂರ್ನಿಯ ಎಲ್ಲಾ ಪಂದ್ಯಗಳು ದುಬೈ ಗೆ ಶಿಫ್ಟ್ ಆಗುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನಕ್ಕೆ ಭೀತಿ ಶುರುವಾಗಿದೆ.
ಚಾಂಪಿಯನ್ ಟ್ರೋಫಿಯ ಪಂದ್ಯಗಳು ನಡೆಯುವ ಕ್ರೀಡಾಂಗಣಗಳು ಇನ್ನು ಸಿದ್ಧವಾಗಿಲ್ಲ. ಪೂರ್ಣಗೊಂಡಿಲ್ಲ. ಆಸನಗಳು, ಫ್ಲಡ್‌ಲೈಟ್‌ಗಳು, ಇತರೆ ಸೌಲಭ್ಯಗಳು ಮತ್ತು ಔಟ್‌ಫೀಲ್ಡ್, ಪಿಚ್ ಗಳು ಮತ್ತು ಆಟದ ಮೇಲ್ಮೈ ಸೇರಿದಂತೆ ತುಂಬಾ ಕೆಲಸ ಬಾಕಿ ಉಳಿದಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ.