ಅಂಕಣ

ಬೆತ್ತಲ ಬೆಳಕು: ನನಗೆ ಯಾವ ಪಾಠವೂ ಅರ್ಥವಾಗುತ್ತಿಲ್ಲ!

Share It

ಬೆಳಕಿಗೆ ಆಕಾರವಿಲ್ಲ, ರೂಪವಿಲ್ಲ, ನಾವು ಯಾವ ಆಕಾರಕ್ಕಾದರೂ ತುಂಬಬಹುದು. ಇಲ್ಲ ಬಯಲಲ್ಲಾದರು ಬಿಟ್ಟು ಅದರ ವಿಸ್ತಾರತೆಯನ್ನು ಅರಿಯಬಹುದು. ಬೆಳಕಿದ್ದ ಕಡೆ ಕತ್ತಲೆಗೆ ಕೆಲಸವಿರುವುದಿಲ್ಲ. ಕತ್ತಲಿರುವ ಕಡೆ ಬೆಳಕು ಬಂದರೆ ಅದೊಂದು ಸಂಭ್ರಮ. ಆಫ್ರಿಕಾ ಖಂಡದ ನಿಗ್ರೋಗಳಿಗೆ ಬಂದ ಜ್ಞಾನದ ಬೆಳಕದಾಗಿರಬೇಕು. ಭಾರತದ ಅಸ್ಪçಶ್ಯರ ಬದುಕಿನಲ್ಲಿ ಮೂಡಿದ ಅಕ್ಷರದ ಬೆಳಕಾಗಿರಬೇಕು. ಅಲ್ಲಿ ನೆಲ್ಸೇನ್ ಮಂಡೆಲಾ, ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಇವರಿಬ್ಬರು ತೋರಿದ ಹಾದಿ ವಿಶಿಷ್ಟವಾದದು. ಒಬ್ಬ ಮನುಷ್ಯನ ಕೈಯಲ್ಲಿ ಇಷ್ಟೆಲ್ಲ ಓದುವುದಕ್ಕೆ, ಬರೆಯುವುದಕ್ಕೆ, ಬದಲಾಯಿಸುವುದಕ್ಕೆ ಸಾಧ್ಯವಿದೆಯೇ? ಎಂದು ಯಾರಾದರು ಕೇಳಿದರೆ ಅದಕ್ಕೆ ಉದಾಹಾರಣೆಯಾಗಿ ಇವರನ್ನೇ ತೋರಿಸಬಹದು. 
 ನಾವು ದೈಹಿಕವಾಗಿ ಬೆತ್ತಲಾಗುವುದು ಅಥವಾ ಬಟ್ಟೆ ತೊಡುವುದು ಕೇವಲ ನಮ್ಮ ಐಹಿಕ ಸುಖಕ್ಕಾಗಿ ಅಷ್ಟೆ. ಬೆಳಕ ಬಟ್ಟೆ ತೊಡುವುದು ನಮ್ಮ ಮೆದುಳಿನ ಮತ್ತು ಸಾಧನೆಯ ಖುಷಿಗಾಗಿ. ವೈದ್ಯರೊಬ್ಬರು ಒಬ್ಬ ಮನುಷ್ಯ ಆರೋಗ್ಯವಾಗಿರಲು ಎಂಟು ಗಂಟೆ ನಿದ್ದೇ ಮಾಡಬೇಕು ಎಂದು ಹೇಳುತ್ತಾರೆ. ಅದು ಸರಿ ಇರಬಹುದು. ಸಾಧನೆಯ ಹುಚ್ಚು ಹತ್ತಿಸಿಕೊಂಡವನು ಎರಡು ಗಂಟೆ ನಿದ್ದೆ ಮಾಡಿ, ಎದ್ದು ಮತ್ತೆ ಪುಸ್ತಕಗಳನ್ನು ತೆರೆದು ಕೂರುತ್ತಾನೆ. ಅವನಿಗೆ ಜ್ಞಾನದ ಮುಂದೆ ಬೆತ್ತಲಾಗುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ. ಆಗಂತ ಓದುವವನು ಬಟ್ಟೆ ಬಿಚ್ಚಿ ಓದಬೇಕು ಎನ್ನುವ ತಪ್ಪು ಕಲ್ಪನೆಯೂ ಇದಲ್ಲ. ಮನಸ್ಸು ಬಿಚ್ಚಿ ಓದುವ ಕ್ರಿಯೆ. ನಿಮ್ಮ ಮನಸ್ಸು ಪುಸ್ತಕದ ಅಕ್ಷರಗಳನ್ನು ಗ್ರಹಿಸುವಾಗ ಬೇರೆನನ್ನು ಗ್ರಹಿಸದಿರುವುದೇ ಬೆಳಕ ಬೆತ್ತಲು. ಅಲ್ಲೊಂದು ಕಿಡಿ ಹತ್ತಿಕೊಂಡು ಉರಿಯುವಾಗ ನಿಮ್ಮ ಜ್ಞಾನದ ಹಸಿವು ಹೆಚ್ಚುತ್ತಾ ಹೋಗಬೇಕು. ದಾಹ ಹೆಚ್ಚಾದರೆ ಮತ್ತಷ್ಟು ಮಗದೊಷ್ಟು  ಜ್ಞಾನಕ್ಕೆ ತೆರೆದುಕೊಳ್ಳಬೇಕು.
 ಮನುಷ್ಯನ ಮೆದುಳು ಎಷ್ಟು ಸೂಕ್ಷö್ಮವೋ ಅಷ್ಟೇ ಗ್ರಹಿಕೆಯ ವಿಸ್ತಾರತೆಯನ್ನು ಪಡೆದುಕೊಂಡಿದೆ. ಕೆಲವರಿಗೆ ಅವರ ಮೆದುಳಿನ ಶಕ್ತಿಯೇ ಗೊತ್ತಿರುವುದಿಲ್ಲ. ನನ್ನ ವಿದ್ಯಾರ್ಥಿಗಳಿಬ್ಬರು ಎದ್ದು ನಿಂತು ನೀವು ಒಂದು ಕವನವನ್ನು ಇಷ್ಟು ವೇಗವಾಗ ಬೋಧಿಸಿದರೆ ನಮಗೆ ಅದು ಹೇಗೆ ಅರ್ಥವಾಗುತ್ತದೆ? ನೀವು ನಿಧಾನಕ್ಕೆ ಹೇಳಿ ಎಂದರು. ನಾನು ದ.ರಾ. ಬೇಂದ್ರೆ ಅವರ ‘ಜೋಗಿ, ಕವನವನ್ನು ಬೇಕಂತಲೇ ಎಂಟು ಗಂಟೆಗಳನ್ನು ಬಳಸಿಕೊಂಡು ದಿನ ಬಿಟ್ಟು ದಿನ ಕವನದ ಸಾರ ಮತ್ತು ವಿಮರ್ಶೆ ಅದರ ಆಶಯವನ್ನು ಹೇಳುತ್ತಾ ಹೋದೆ. ಬೇರೆ ವಿದ್ಯಾರ್ಥಿಗಳು ಎದ್ದು ಇಷ್ಟು ನಿಧಾನವೇಕೆ? ನೀವು ಮೊದಲಿನಂತೆಯೇ ಪಾಠ ಮಾಡಿ ಎಂದರು. ಆದರೆ ವೇಗವಾಯ್ತು ಪಾಠ ಎಂದ ವಿದ್ಯಾರ್ಥಿಗಳನ್ನು ಕವನ ಅಂತ್ಯವಾದ ಮೇಲೆ ಈಗ ಅರ್ಥವಾಯ್ತ ಎಂದು ಕೇಳಿದೆ. ಇಲ್ಲ ಸರ್ ನಮಗೆ ಈ ಕವನವೇ ಅರ್ಥವಾಗುತ್ತಿಲ್ಲ ಎಂದರು. ನಾನು ಮೂವತ್ತು ವಿದ್ಯಾರ್ಥಿಗಳಿಗೂ ಈ ಕವನ ಅರ್ಥವಾಗಲಿ ಎಂದು ಬಯಸಿದ್ದು ತಪ್ಪಾಯ್ತು ಅನಿಸಿತು. ಕಾರಣ ಇಲ್ಲಿ ನನ್ನ ವಿದ್ಯಾರ್ಥಿಗಳು ಕೆಲವರು ತಮ್ಮ ಮೆದಳನ್ನು ತೆರೆದು ಕೂತಿದ್ದರು. ಇನ್ನು ಕೆಲವರು ತರಗತಿಯಲಿ ಅರ್ಧ ಮತ್ತು ಹೊರಗಿನ ವಿಚಾರಕ್ಕೆ ಇನ್ನರ್ಧ ತಮ್ಮನ್ನು ಬೆತ್ತಲು ಮಾಡಿಕೊಂಡಿದ್ದರು. ಕವನವೇ ಅರ್ಥವಾಗಲಿಲ್ಲ ಎಂದ ವಿದ್ಯಾರ್ಥಿಗಳು ತರಗತಿಯಲಿ ಹಾಜರಷ್ಟೇ ಇದ್ದರು. ಅವರ ಮೆದುಳನ್ನು ಸಂಪೂರ್ಣವಾಗಿ ಹೊರಗಿನ ತಮಗೆ ಸಂಬAಧಪಡದ ವಿಚಾರಕ್ಕೆ ಒಗ್ಗಿಸಿಕೊಂಡಿದ್ದರು. ಅವರನ್ನು ಬಗ್ಗಿಸಿ ಪಾಠ ಅರ್ಥ ಮಾಡಿಕೊಳ್ಳಿ ಎನ್ನುವುದಕ್ಕೆ ನನಗೆ ಯಾವುದೇ ಹಕ್ಕು ಇರಲಿಲ್ಲ. ಅವರನ್ನು ಅವರೇ ನಿಯತ್ರಣಕ್ಕೆ ತೆಗೆದುಕೊಳ್ಳಲು ಸೋಲುತ್ತಿರುವಾಗ, ಬೇಂದ್ರೆಯ ಜೋಗಿ ಕವಿತೆ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ಅಪೇಕ್ಷೆ ಹೊಂದಿದ್ದು ನನ್ನ ಮೂರ್ಖತನ. 
ಸಾಹಿತ್ಯಕ್ಕೆ ಮಾದಕ ಶಕ್ತಿ ಇರುವುದಿಲ್ಲ. ಬೋಧಕ ಮತ್ತು ವೇದಕ ಹಾಗೂ ಮೋಹಕ ಶಕ್ತಿ ಇರುತ್ತದೆ. ಒಂದು ಕಾವ್ಯ ವ್ಯಕ್ತಿಯನ್ನು ಬದಲಾಯಿಸಿ ಬಿಡಬಹುದು. ಆದರೆ ಈಗಾಗಲೇ ಹವ್ಯಾಸಗಳಿಗೆ ಒಳಗಾಗಿರುವ ಯುವಕ ಸಾಹಿತ್ಯದ ಗುಂಗಿನೊಳಗೆ ಮುಳುಗಲಾರ. ಅವನು ಅದನ್ನು ವ್ಯಂಗ್ಯವಾಗಿಯೇ ನೋಡುತ್ತಾನೆ. ಅದಕ್ಕೆ ನನ್ನ ವಿದ್ಯಾರ್ಥಿಗಳು ಕೆಲವರು ‘ಇಷ್ಟೊಂದು ಯಾಕೆ ಹೇಳ್ತಿರಿ ಸಾರ್, ಅಂಗಡಿಯಲ್ಲಿ ಗೈಡ್ ಸಿಗುತ್ತೆ ಓದಿಕೊಳ್ಳುತ್ತೇವೆ ಬಿಡಿ’ ಎಂದು ನನ್ನ ಪಾಠ ಮಾಡುವ ಆಸಕ್ತಿಗೆ ಒಂದು ಕ್ಷಣ ಬ್ರೇಕ್ ಹಾಕುತ್ತಾರೆ. ‘ನಾನು ಬ್ರೇಕ್ ಫೇಲಾದ ಮೇಷ್ಟçಲ್ಲ, ಬ್ರೇಕ್ ಇರುವ ಮೇಷು’್ಟç ನೀನು ಚೂರು ನಿನ್ನ ಸಾಹಿತ್ಯದ ತಾತ್ಸಾರಕ್ಕೆ ಬ್ರೇಕ್ ಹಾಕಿಕೊ. ಪರೀಕ್ಷೆ ಯಾರು ಬೇಕಾದರೂ ಬರೆಯಬಹುದು. ವಿಚಾರವನ್ನು ಎಲ್ಲರೂ ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಹೊತ್ತಿಗೆ ಅವನಿಗೆ ಕಿನ್ನತೆಯೇ ಆವರಿಸಿದಂತೆ ಮುಖ ಉಜ್ಜಿಕೊಳ್ಳುತ್ತಾ ಕುಳಿತು ಬಿಡುತ್ತಾನೆ. ಆಗಾದರೆ ಯುವಕರ ಮೆದುಳನ್ನು ಬೆತ್ತಲುಗೊಳಿಸುತ್ತಿರುವ ವಿಚಾರಗಳು ಯಾವುವು ಎಂದು ಒಂದು ಕಡೆಯಿಂದ ಪಟ್ಟಿ ಮಾಡುತ್ತಾ ಹೋದರೆ:

೧. ಆಧುನಿಕ ಪಾಠ ಶೈಲಿಗಳು
೨. ಮೊಬೈಲ್ ಮತ್ತ ಇಂರ‍್ನೆಟ್ ಗೀಳು
೩. ಪ್ರೀತಿ-ಪ್ರೇಮವೆಂಬ ರೋಗ
೪. ಪೋಷಕರು ಮಕ್ಕಳನ್ನು ಬೆಳೆಸುತ್ತಿರುವ ರೀತಿ
೫. ಸಮಾಜ ಯುವಕರನ್ನು ನಡೆಸಿಕೊಳ್ಳುತ್ತಿರುವ ರೀತಿ
೬. ಶೈಕ್ಷಣಿಕ ಬದಲಾವಣೆಗಳು
ನಾವು ಅಂದುಕೊAಡಿದ್ದೆಲ್ಲ ಸಿಗುತ್ತದೆ ಎನ್ನುವ ಒಂದು ಭಾವನೆ ಯುವಕರಲ್ಲಿ ಮೂಡಿ ಬಿಟ್ಟರೆ ಅವರು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಬಂಧನಗಳೆಲ್ಲವನ್ನು ಕಳಚಿ ಮಾದಕ ವ್ಯಸನಕ್ಕೆ, ಕುಡಿತಕ್ಕೆ, ಪೋಲಿ ಸ್ನೇಹಗಳಿಗೆ ಮನಸ್ಸನ್ನು ಬೆತ್ತಲು ಮಾಡಿಕೊಳ್ಳುತ್ತಾರೆ. ಇವರು ತಮ್ಮ ಸ್ವಂತ ಬದುಕಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಂಥ ಯುವಕರ ಸಂಖ್ಯೆ ಭಾರತದಲ್ಲಿ ಅಧಿಕವಾಗುತ್ತಿದೆ. ತಮ್ಮ ಪಠ್ಯ ಪುಸ್ತಕದ ವಿಚಾರಗಳನ್ನು ಸಂಪೂರ್ಣವಾಗಿ ಕಲಿಯದೆ ಅರೆಜ್ಞಾನಿಗಳಾಗಿ ಹೊರಗೆ ಬಂದು ಉದ್ಯೋಗ ಹುಡುಕುತ್ತಾರೆ. ಅರ್ಹತೆ ಇದ್ದರೂ ಜ್ಞಾನವಿಲ್ಲದ ಕಾರಣಕ್ಕೆ ಉದ್ಯೋಗ ಪಡೆಯದೆ ಮತ್ಯಾವುದೋ ಇಷ್ಟವಿಲ್ಲದ ಕೆಲಸಕ್ಕೆ ತೊಡಗಿಕೊಂಡು ಜಂಜಾಟದ ಜೀವನವನ್ನು ನಡೆಸಲು ಸಜ್ಜಾಗುತ್ತಾರೆ. ನೂರು ಅವಕಾಶಗಳನ್ನು ಮೂರು ನಿಮಿಷದಲ್ಲಿ ಗಾಳಿಗೆ ತೂರುವ ಯುವಕರೇ ನೀವು ಜ್ಞಾನ ತುಂಬಿಕೊಳ್ಳಲು ಮಾನಸಿಕವಾಗಿ ಬೆತ್ತಲಾಗಿ. ಅಲ್ಲಿ ಜ್ಞಾನದ ಬಟ್ಟೆ ಸಿಕ್ಕೆ ಸಿಗುತ್ತದೆ. ನೀವು ಬೆಳಕಿನಲ್ಲಿ ನಡೆಯುವ ಅವಕಾಶ ಪಡೆಯುತ್ತೀರಿ.

ಲೇಖಕರು: ಹಳ್ಳಿ ವೆಂಕಟೇಶ್, ಉಪನ್ಯಾಸಕರು


Share It

You cannot copy content of this page