ಆಲಿಘಡ ವಿವಿಯಲ್ಲಿ ‘ಬೀಫ್ ಬಿರಿಯಾನಿ’ ವಿವಾದ: ಟೈಪಿಂಗ್ ದೋಷ ಎಂದ ವಿವಿ ಆಡಳಿತ ಮಂಡಳಿ
ಆಲಿಘಡ: ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮೆನುವಿನಲ್ಲಿ ಬೀಫ್ ಬಿರಿಯಾನಿ ಇದೆ ಎಂಬ ವಿಡಿಯೋ ವೈರಲ್ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದ್ದು, ಇದು ಟೈಪಿಂಗ್ ದೋಷದಿಂದಾದ ಪ್ರಮಾದ ಎಂದು ವಿವಿ ಸ್ಪಷ್ಟಪಡಿಸಿದೆ.
ದೋಷಕ್ಕೆ ಕಾರಣವಾದವರಿಗೆ ಶೋಕಾಸ್ ನೀಡಿರುವುದಾಗಿಯೂ ವಿವಿ ತಿಳಿಸಿದ್ದು, ಟೈಪಿಂಗ್ ದೋಷದಿಂದ ಪ್ರಮಾದವಾಗಿದ್ದು, ಅದನ್ನು ಸರಿಪಡಿಸಲಾಗಿದೆ. ಜತೆಗೆ ಕಾರಣವಾದವರೊಗೆ ಶೋಕಾಸ್ ನೊಟೀಸ್ ನೀಡಲಾಗಿದೆ ಎಂದು ವಿವಿ ಸ್ಪಷ್ಟನೆ ನೀಡಿದೆ.
ಮೆನುವಿನಲ್ಲಿ ವಿವಿಯ ಸರ್ ಶಾ ಸುಲೈಮಾನ್ ಹಾಲ್ ನಲ್ಲಿ ಭಾನುವಾರ ಮಧ್ಯಾಹ್ನದ ಪಟ್ಟಿ ಬದಲಾಗಿದೆ. ಬಹುಜನರ ಬೇಡಿಕೆಯ ಕಾರಣದಿಂದ ಚಿಕನ್ ಬಿರಿಯಾನಿ ಹಾಗೂ ಬೀಫ್ ಬಿರಿಯಾನಿ ನೀಡಲಾಗುವುದು ಎಂದು ಬರೆಯಲಾಗಿತ್ತು.
ಈ ಮೆನುವನ್ನು ಗಮನಿಸಿದ ಕೆಲವು ವಿದ್ಯಾರ್ಥಿಗಳು ಇದನ್ನು ಗಮನಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಿ ಸ್ಪಷ್ಟನೆ ನೀಡಿದೆ.


