ಬೆಂಗಳೂರು:ಬಿಜೆಪಿಯಲ್ಲೇ ಇರುವ ದಲಿತ ನಾಯಕರು ಆರ್ ಎಸ್ಎಸ್ ಅಪ್ಪಣೆ ಇಲ್ಲದೆ ಮಾತಾಡೋಕೆ ಸಾಧ್ಯಾನಾ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಪ್ರಶ್ನೆ ಮಾಡಿದ್ದಾರೆ.
ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುನಿರತ್ನ ಒಬ್ಬ ಶಾಸಕರಾಗಿ ಇಂತಹ ಹೇಳಿಕೆ ಕೊಟ್ಟಿರುವುದು ವಿಷಾದನೀಯ ವಿಷಯ. ಅವರ ವಿರುದ್ಧ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಘಟನೆಗೆ ಸಂಬಂಧಿಸಿ, ಬಿಜೆಪಿ ನಾಯಕರ ಬಾಯಿ ಬಂದ್ ಆಗಿದೆ. ಆರ್ ಎಸ್ಎಸ್ ಅವರನ್ನು ಮಾತನಾಡದಂತೆ ತಡೆದಿದೆ. ಹೀಗಾಗಿ, ಯಾರಿಗೂ ಇದು ತಪ್ಪು ಎನಿಸುತ್ತಿಲ್ಲ. ಸಂವಿಧಾನಬಾಹಿರ ಪದಗಳನ್ನು ಬಳಕೆ ಮಾಡುವ ಶಾಸಕರ ವಿರುದ್ಧ ಮಾತನಾಡಲು ಅಲ್ಲಿನ ನಾಯಕರಿಗೆ ಆಗುತ್ತಿಲ್ಲ ಎಂದರು.
ದಲಿತ ಪದ ಸೇರಿದಂತೆ ಶಾಸಕರು ಬಳಸಿರುವ ಎಲ್ಲ ಪದಗಳಿಗೂ ಜಾಮೀನು ರಹಿತ ಅಪರಾಧ. ಈ ಹಿನ್ನೆಲೆಯಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ಅವರಿಗೆ ಸರಿಯಾದ ಶಿಕ್ಷೆ ಕಾನೂನಿನ ಅಡಿಯಲ್ಲಿ ಆಗುತ್ತದೆ ಎಂದರು.