ಜನವರಿಯಲ್ಲಿ ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ

Bengaluru-Metro-3-1
Share It


ಬೆಂಗಳೂರು: ಬೊಮ್ಮಸಂದ್ರದಿಂದ ಎಲೆಕ್ಟ್ರಾನಿಕ್ ಸಿಟಿ ಮೂಲಕ ಆರ್‌ವಿ ರಸ್ತೆಯನ್ನು ಸಂಪರ್ಕಿಸುವ ಹಳದಿ ಮಾರ್ಗದ ಮೆಟ್ರೋ ಸೇವೆಯು ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಉದ್ಘಾಟನೆಯಾಗಲಿದೆ.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ತನ್ನ ಮೊದಲ ಚಾಲಕ ರಹಿತ ರೈಲು ಸೆಟ್ ಅನ್ನು ಕೋಲ್ಕತ್ತಾ ಮೂಲದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ನಿಂದ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪಡೆಯಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರೈಲು ಸೆಟ್‌ನ ತಯಾರಿಕೆ ಬಹುತೇಕ ಪೂರ್ಣಗೊಂಡಿದೆ ಎಂದು ಟಿಟಾಗರ್ ರೈಲ್ ಸಿಸ್ಟಮ್ಸ್ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಪೃತೀಶ್ ಚೌಧರಿ ತಿಳಿಸಿದ್ದಾರೆ. ಬೆಂಗಳೂರು ಮೆಟ್ರೋ 4RS-DM ಯೋಜನೆಗಾಗಿ ಡಿಸೆಂಬರ್ ಅಂತ್ಯ ಅಥವಾ 2025 ರ ಜನವರಿ ಆರಂಭದಲ್ಲಿ ಮೊದಲ ಸ್ಥಳೀಯ ರೈಲು ಸೆಟ್ ಅನ್ನು ರವಾನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಹೆಬ್ಬಗೋಡಿ ಡಿಪೋ ಫೆ. 2024 ರಲ್ಲಿ ಚೀನಾದಿಂದ ಮೊದಲ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯ ಮೂಲ ಮಾದರಿಯನ್ನು ಸ್ವೀಕರಿಸಿದೆ. BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರು ಡಿಸೆಂಬರ್ ಅಂತ್ಯದ ವೇಳೆಗೆ ರೈಲು ಸೆಟ್‌ಗಳ ಸಮಯೋಚಿತ ವಿತರಣೆಯನ್ನು ಅವಲಂಬಿಸಿ 3 ರೈಲುಗಳೊಂದಿಗೆ ಜ. 2025 ರಲ್ಲಿ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.

ಈ ರೈಲುಗಳೊಂದಿಗೆ, BMRCL ಜನವರಿ ಎರಡನೇ ಮತ್ತು ಅಂತಿಮ ವಾರಗಳ ನಡುವೆ ಹಳದಿ ಮಾರ್ಗವನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ. 2 ನೇ ರೈಲು ಸೆಟ್ ಡಿಸೆಂಬರ್ ಅಂತ್ಯ ಅಥವಾ ಜನವರಿ 2025 ರ ವೇಳೆಗೆ ಬರುವ ನಿರೀಕ್ಷೆಯಿದೆ. ಜನವರಿ 2ನೇ ಮತ್ತು ಅಂತಿಮ ವಾರಗಳ ನಡುವೆ ಹಳದಿ ಮಾರ್ಗ ಉದ್ಘಾಟ‌ನೆಯಾಗುವ ಸಾಧ್ಯತರ ಎಂದು ನಿಗಮದ ಮೂಲಗಳು ತಿಳಿಸಿವೆ.


Share It

You cannot copy content of this page