SC/ST ನೌಕರರ ಮಕ್ಕಳಿಗೆ ಅನುಕಂಪದ ನೌಕರಿ : ಸರಕಾರದಿಂದ ಗುಡ್ ನ್ಯೂಸ್

Share It

ಬೆಂಗಳೂರು: SC/ ST ಸಿಬ್ಬಂದಿಯ ಮರಣಾನಂತರ ಅನುಕಂಪದ ಆಧಾರದ ನೌಕರಿ ಪಡೆಯುವ ವಿಚಾರದಲ್ಲಿ ಸರಕಾರ ಸಿಹಿಸುದ್ದಿ ನೀಡಿದೆ.

ಈ ವಿಚಾರದಲ್ಲಿ ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಸರಕಾರಿ ಹುದ್ದೆಯಲ್ಲಿ ಇರುವ ಸಿಬ್ಬಂದಿ ಮರಣ ಹೊಂದಿದ ಸಂದರ್ಭದಲ್ಲಿ ಆತನ ಮಕ್ಕಳಿಗೆ  ಕನಿಷ್ಠ15 ವರ್ಷವಾಗಿರಬೇಕು ಎಂಬ ನಿಯಮ ಸಡಿಲಿಕೆಯ ನಿರ್ಧಾರ ತೆಗೆದುಕೊಂಡಿದೆ.

ಸಿಎಂ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮೃತಪಟ್ಟ ಸಿಬ್ಬಂದಿ ಮಕ್ಕಳು ಹುದ್ದೆ ಪಡೆಯಲು ಅರ್ಹರಾಗಲು, 3 ವರ್ಷದಲ್ಲಿ 18 ವರ್ಷ ಪೂರೈಸಬೇಕು ಎಂಬ ನಿಯಮ ಸಡಿಲಿಕೆಯ ತೀರ್ಮಾನ ಕೈಗೊಂಡಿತು.

ಅನುಕಂಪದ ಆಧಾರದ ಹುದ್ದೆ ನೀಡುವಾಗ SC/ST ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಕಳೆದ ಒಂದು ವಾರದ ಹಿಂದೆ ಸರಕಾರ ವಿದ್ಯಾರ್ಹತೆ ಪರಿಗಣಿಸಿ ಹುದ್ದೆ ನೀಡುವಂತೆ ಸುತ್ತೋಲೆ ಹೊರಡಿಸಿತ್ತು. ಇದೀಗ ವಯೋಮಿತಿ ವಿಚಾರ ಹೆಚ್ಚು ಸಮಸ್ಯೆಯನ್ನೊಡುತ್ತಿದೆ ಎಂಬ ಮನವಿ ಮೇರೆಗೆ ವಯೋಮಿತಿಯ ಸಡಿಲಿಕೆಗೆ ಸರಕಾರ ತೀರ್ಮಾನಿಸಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನೌಕರ ಮೃತಪಟ್ಟ 3 ವರ್ಷದಲ್ಲಿ ಮೃತರ ಮಕ್ಕಳಿಗೆ18 ವರ್ಷ ತುಂಬಿದರೆ ಮಾತ್ರ ನೌಕರಿ ಕೊಡುವ ನಿಯಮವಿತ್ತು. ಇದನ್ನು ಸಡಿಲಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


Share It

You May Have Missed

You cannot copy content of this page