ರಾಜಕೀಯ ಸುದ್ದಿ

ನನಗೆ ಹಿಂದಿ ಗೊತ್ತಿಲ್ಲ, ಇಂಗ್ಲೀಷ್ ನಲ್ಲಿ ಮಾಹಿತಿ ಕೊಡಿ: ರೈಲ್ವೆ ಇಲಾಖೆಗೆ ಡಿಎಂಕೆ ಎಂಪಿ ಟಾಂಗ್ !

Share It


ಹೊಸದಿಲ್ಲಿ : ಹಿಂದೆ ಹೇರಿಕೆ ವಿರುದ್ಧ ಸೈದ್ಧಾಂತಿಕ ಹೋರಾಟ ಮುಂದುವರಿಸಿರುವ ತಮಿಳುನಾಡು ಡಿಎಂಕೆ ಸಂಸದ ಎಂ.ಎಂ. ಅಬ್ದುಲ್ಲಾ ರೈಲ್ವೆ ಇಲಾಖೆಯ ಮಾಹಿತಿಗಳನ್ನು ಇಂಗ್ಲೀಷ್ ನಲ್ಲಿಯೇ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಕೇಂದ್ರ ಸರಕಾರದ ಹಿಂದೆ ಹೇರಿಕೆಗೆ ತಮ್ಮದೆ ಆದ ರೀತಿಯಲ್ಲಿ ತಿರುಗೇಟು ನೀಡುವ ಡಿಎಂಕೆ ಸಂಸದರು, ಇದೀಗ ಹಿಂದಿಯಲ್ಲಿ ನೀಡಿದ್ದ ರೈಲ್ವೆ ಇಲಾಖೆಯ ಮಾಹಿತಿ ಹಿಂದಿಯಲ್ಲಿದ್ದು ನನಗೆ ಅರ್ಥವಾಗಿಲ್ಲ. ಹೀಗಾಹಿ, ಈ ಮಾಹಿತಿಯನ್ನು ಇಂಗ್ಲೀಷ್ ನಲ್ಲಿ ನೀಡಬೇಕು ಎಂದು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ.

ಪುದುಕೋಟೆಯ ಸಂಸದರಾದ ಎಂ.ಎಂ. ಅಬ್ದುಲ್ಲಾ, ಇತ್ತೀಚೆಗೆ ಸಂಸತ್ತಿನಲ್ಲಿ ಕಡಿಮೆ ಗುಣಮಟ್ಟದ ಆಹಾರವನ್ನು ರೈಲಿನಲ್ಲಿ ಪೂರೈಕೆ ಮಾಡುತ್ತಿರುವ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಉತ್ತರ ನೀಡಿದ್ದ ರೈಲ್ವೇ ಇಲಾಖೆ ಹಿಂದಿಯಲ್ಲಿ ಎಲ್ಲ ಮಾಹಿತಿಯನ್ನು ಒದಗಿಸಿತ್ತು. ಆದರೆ, ನೀಡಿರುವ ಉತ್ತರ ನನಗೆ ಅರ್ಥವಾಗಿಲ್ಲ ಎಂದು ಅಬ್ದುಲ್ಲಾ ಪತ್ರ ಬರೆದಿದ್ದಾರೆ.

ರೈಲ್ವೇ ಸಚಿವಾಲಯ ಈ ಹಿಂದೆಯೂ ಪುದುಕೋಟೆಯ ರೈಲ್ವೇ ಮೇಲ್ಸೇತುವೆ ಗಳ ಬಗ್ಗೆ ಪ್ರಶ್ನೆ ಮಾಡಿದಾಗ ಹಿಂದಿಯಲ್ಲಿ ಉತ್ತರ ಕೊಟ್ಟಿತ್ತು. ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಮಾತನಾಡಿ, ಇಂಗ್ಲೀಷ್ ನಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಅವರು ಕೂಡ ಒಪ್ಪಿದ್ದರು. ಆದರೆ, ಇದೀಗ ಮತ್ತೇ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಹಿಂದಿಯಲ್ಲಿ ಕೊಟ್ಟಿದ್ದಾರೆ ಎಂದು ಅಬ್ದುಲ್ಲಾ ಕಿಡಿಕಾರಿದ್ದಾರೆ.

1976 ಭಾಷಾ ನೀತಿಯ ಪ್ರಕಾರ ತಮಿಳುನಾಡಿಗೆ ಎಲ್ಲ ಮಾಹಿತಿಯನ್ನು ಇಂಗ್ಲೀಷ್ ನಲ್ಲಿ ನೀಡಬೇಕು. ಆದರೆ, ಕೇಂದ್ರ ಸರಕಾರ ತಾನು ಮಾಡಿದ ಕಾಯಿದೆಯನ್ನೇ ಉಲ್ಲಂಘನೆ ಮಾಡುತ್ತಿದೆ. ಇದು ಸಂವಿಧಾನದ ವಿರೋಧಿ ನಡೆ. ಹೀಗಾಗಿ, ಇಂಗ್ಲೀಷ್ ನಲ್ಲಿಯೇ ಮಾಹಿತಿ ಕೊಡುವಂತೆ ಕೇಳಿದ್ದೇನೆ ಎಂದು ಎಬ್ದುಲ್ಲಾ ತಿಳಿಸಿದ್ದಾರೆ.


Share It

You cannot copy content of this page