ಅರಣ್ಯ ನಮ್ಮೆಲ್ಲರ ಅಸ್ತಿತ್ವ. ಅರಣ್ಯವಿಲ್ಲದೆ ಜೀವ ರಾಶಿ ಇಲ್ಲ. ಮಾನವನಿಗೆ ಬೇಕಾದ ಆಕ್ಸಿಜನ್ ಅನ್ನು ಒದಗಿಸುತ್ತಿರುವುದು ನಮ್ಮ ಕಾಡುಗಳಾಗಿವೆ. ಒಂದು ವೇಳೆ ಕಾಡು ಇಲ್ಲದಿದ್ದರೆ ಭೂಮಿ ನಿಶಬ್ದವಾಗುತ್ತಿತ್ತು. ಅಷ್ಟಕ್ಕೂ ನಮ್ಮ ಕರ್ನಾಟಕದಲ್ಲಿ ಹೆಚ್ಚು ಕಾಡನ್ನು ಹೊಂದಿರುವ ಜಿಲ್ಲೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಭೂಮಿಯ ಪ್ರತಿಯೊಂದು ಜೀವಿಯೂ ಬದುಕಲು ವಾಯು ಅತ್ಯವಶ್ಯಕ. ಇಂದು ಅರಣ್ಯವನ್ನು ಉಳಿಸುವ ಪರಿಸ್ಥಿತಿ ಎದುರಾಗಿದೆ. ನಮ್ಮ ಕರ್ನಾಟಕದಲ್ಲಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಅಗ್ರ ಸ್ಥಾನದಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯು ಒಟ್ಟು 8,143.53 ಕಿಮೀ ಅರಣ್ಯ ಪ್ರದೇಶವನ್ನು ಹೊಂದಿದೆ. ಆ ಪೈಕಿ ದಟ್ಟ ಅರಣ್ಯ 1,118 ಕಿಮೀ ಹಾಗೂ ಸಾಮಾನ್ಯ ಅರಣ್ಯ 5,861.39 ಕಿಮೀ ಇದೆ.
ಎರಡನೆಯ ಸ್ಥಾನದಲ್ಲಿ ಶಿವಮೊಗ್ಗ ಇದೆ. ಶಿವಮೊಗ್ಗದಲ್ಲಿ 4291.43 ಕಿಮೀ ಇದ್ದು ಆ ಪೈಕಿ 495.44 ಕಿಮೀ ದಟ್ಟ ಅರಣ್ಯ ಹಾಗೂ 2,870.65 ಕಿಮೀ ಸಾಮಾನ್ಯ ಅರಣ್ಯವನ್ನು ಕಾಣಬಹುದು.
ಮೂರನೇ ಸ್ಥಾನದಲ್ಲಿ ಕಾಫಿ ನಾಡು ಎಂದೇ ಖ್ಯಾತಿಯನ್ನು ಪಡೆದಿರುವ ಚಿಕ್ಕಮಗಳೂರು ಇದೆ. ಇಲ್ಲಿ ಸುಮಾರು 4057.96 ಕಿಮೀ ಅರಣ್ಯ ಪ್ರದೇಶವನ್ನು ಹೊಂದಿದೆ. 970.78 ಕಿಮೀ ದಟ್ಟ ಅರಣ್ಯವನ್ನು ಹೊಂದಿದೆ. 2609 ಕಿಮೀಯಷ್ಟು ಸಾಮಾನ್ಯ ಅರಣ್ಯವಿದೆ.
ನಾಲ್ಕನೆಯ ಸ್ಥಾನದಲ್ಲಿ ದಕ್ಷಿಣ ಕನ್ನಡ ಇದ್ದು ಇದರ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 3,301.39 ಕಿಮೀ. ಆ ಪೈಕಿ 546.31ಕಿಮೀ ದಟ್ಟವಾದ ಅರಣ್ಯ ಇದೆ. 1605.51 ಕಿಮೀ ಬಿಡಿಯಾದ ಅರಣ್ಯವಿದೆ.
ಇನ್ನು ಐದನೆಯ ಸ್ಥಾನದಲ್ಲಿ ಕೊಡಗು ಜಿಲ್ಲೆಯಾಗಿದೆ. ಕೊಡಗಿನಲ್ಲಿ ಒಟ್ಟಾರೆ 3234.11 ಕಿಮೀ ಅರಣ್ಯ ಪದೇಶವನ್ನು ಹೊಂದಿದೆ. ಆ ಪೈಕಿ 788.84 ಕಿಮೀ ದಟ್ಟ ಅರಣ್ಯ ಪ್ರದೇಶವಿದೆ. 1871 .04 ಕಿಮೀ ಸಾಮಾನ್ಯ ಅರಣ್ಯವಿದೆ.
ಇವು ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆಗಳು. ಇವುಗಳನ್ನು ಬಿಟ್ಟು ಚಾಮರಾಜನಗರ, ಉಡುಪಿ, ಹಾಸನ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆ ಹೆಚ್ಚು ಅರಣ್ಯವನ್ನು ಹೊಂದಿದೆ.