ಸುದ್ದಿ

ಘನಯತೆಯಿಂದ ಸಾಯುವ ಹಕ್ಕಿನ ಮೊದಲ ಫಲಾನುಭವಿಯಾಗಲು ನಿವೃತ್ತ ಶಿಕ್ಷಕಿ ಆಶಯ

Share It

ದಾವಣಗೆರೆ: ರಾಜ್ಯ ಸರಕಾರದ ಘನಯತೆಯಿಂದ ಸಾಯುವ ಹಕ್ಕಿನ ಸುತ್ತೋಲೆಯ ಮೊದಲ ಲಾಭ ಪಡೆಯಲು ನಿವೃತ್ತ ಶಿಕ್ಷಕಿ ತಯಾರಿ ನಡೆಸಿದ್ದು, ಈ ಕಾನೂನಿನಡಿ ಇಚ್ಛಾ ಮರಣ ಪಡೆಯುವ ಮೊದಲ ವ್ಯಕ್ತಿಯಾಗಲಿದ್ದಾರೆ.

೨೪ ವರ್ಷಗಳಿಂದ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ನರಳುತ್ತಾ, ತಮಗೆ ದಯಾಮರಣ ನೀಡುವಂತೆ ಬೇಡಿಕೊಂಡಿದ್ದರು, ಈವರೆಗೆ ಅವರ ಆಶಯ ಈಡೇರಿರಲಿಲ್ಲ. ಇದೀಗ ರಾಜ್ಯ ಸರಕಾರ ಘನತೆಯಿಂದ ಸಾಯುವ ಹಕ್ಕಿನ ಸುತ್ತೋಲೆ ಹರಡಿಸಿದ್ದು, ಇದರ ಲಾಭವನ್ನು ಶಿಕ್ಷಕಿ ಪಡೆಯಲಿದ್ದಾರೆ.

ಸರಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರಿಗೆ ಇದೀಗ 85 ವರ್ಷ ವಯಸ್ಸಾಗಿದೆ. ಇವರು ಕಳೆದ 24 ವರ್ಷಗಳಿಂದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಮೊದಲಿಗೆ ಸ್ಲಿಪ್ಡ್ ಡಿಸ್ಕ್ನೊಂದಿಗೆ ಹೋರಾಟ ನಡೆಸಿದರು. ಅನಂತರ ಇತ್ತೀಚೆಗೆ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

`ಹೀಗಾಗಿ, ಕಳೆದ 24 ವರ್ಷಗಳಿಂದ ಕರಿಬಸವಮ್ಮ ಮುಖ್ಯಮಂತ್ರಿ, ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ದಯಾಮರಣಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದರು. ನ್ಯಾಯಾಲಯದಲ್ಲಿಯೂ ತನಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಇದೀಗ ಜನವರಿ 30ರಂದು ಕರ್ನಾಟಕ ಸರಕಾರ ಮಾರಕ ಖಾಯಿಲೆಯಿಂದ ಪೀಡಿತರಾಗಿರುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡುವ ಸುತ್ತೋಲೆಯನ್ನು ಹೊರಡಿಸಿದೆ. ಇದರಡಿ ಮೊದಲ ಫಲಾನುಭವಿ ನಾನೇ ಆದರೆ, ನನ್ನ ಹೋರಾಟಕ್ಕೆ ಸಾರ್ಥಕತೆ ಸಿಗಲಿದೆ ಎಂಬುದು ಕರಿಬಸಮ್ಮ ಅವರ ಆಶಯವಾಗಿದೆ.

ಪ್ರಸ್ತುತ ತಮ್ಮ ಪತಿ ಜತೆಗೆ ದಾವಣಗೆರೆ ವೃದ್ಧಾಶ್ರಮವೊಂದರಲ್ಲಿ ಕರಿಬಸಮ್ಮ ವಾಸ ಮಾಡುತ್ತಿದ್ದಾರೆ. ದಯಾಮರಣದ ಕಾನೂನು ಹೋರಾಟದಲ್ಲಿ ಅವರು ಆಸ್ತಿ, ಹಣ ಮತ್ತು ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಇವರು ತಮ್ಮ ಕೊನೆಯ ಉಳಿತಾಯವಾದ 6 ಲಕ್ಷ ರು.ಗಳನ್ನು ಬಿಎಸ್‌ಎಫ್ ಯೋಧರ ಕಲ್ಯಾಣಕ್ಕಾಗಿ ದಾನ ಮಾಡಿದ್ದಾರೆ.


Share It

You cannot copy content of this page