ಬೆಂಗಳೂರು: ಕೋರಮಂಗಲ ಫ್ಲೈಓವರ್ ಕಾಮಗಾರಿಗೆ ಇತ್ತೀಚೆಗೆ ವೇಗ ದೊರೆತಿದ್ದು, ಇದರ ಪ್ರಗತಿ ಪರಿಶೀಲನೆಯನ್ನು ಸಚಿವ ರಾಮಲಿಂಗಾ ರೆಡ್ಡಿ ನಡೆಸಿದರು.
ಜ.8 ರಂದು ವಿಕಾಸಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾ ಶಂಕರ್ ಐಎಎಸ್, ಬಿಬಿಎಂಪಿ ವಿಶೇಷ ಆಯುಕ್ತ ಅವಿನಾಶ್,ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್, ಗುತ್ತಿಗೆದಾರರಾದ ರಘುನಾಥ್ ನಾಯ್ಡು ಮತ್ತು ಕೋರಮಂಗಲ ಹಾಗೂ ನಿವಾಸಿಗಳ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಇಂದು ಕೂಡ ಸಚಿವ ರಾಮಲಿಂಗಾರೆಡ್ಡಿಯವರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಫ್ಲೈಓವರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಮಗಾರಿ 10% ಪ್ರಗತಿ ಕಂಡು ಬಂದಿದೆ. ಮೊದಲು 35% ಕೆಲಸ ಪೂರ್ಣಗೊಂಡಿತ್ತು. ಗುತ್ತಿಗೆದಾರರು ಬಹಳ ದಿನಗಳಿಂದ ಬಾಕಿ ಉಳಿದ ಎರೆಕ್ಷನ್ ಕಾರ್ಯ ಪೂರ್ಣಗೊಳಿಸಿದ್ದು, ಇದು ಸೆಗ್ಮೆಂಟ್ಗಳ ಸ್ಥಾಪನೆ ವೇಗವಾಗಿ ನಡೆಸಲು ನೆರವಾಗಲಿದೆ. ಗುತ್ತಿಗೆದಾರರು 3 ಸ್ಪ್ಯಾನ್ಗಳನ್ನು ಪೂರ್ಣಗೊಳಿಸಿದ್ದು, 35 ಸೆಗ್ಮೆಂಟ್ಗಳ ಎರೆಕ್ಷನ್ ಆಗಿದೆ.
ಫ್ಲೈಓವರ್ ಕೆಳಗಿನ ಪ್ರದೇಶದಲ್ಲಿ ಪಾಳುಮಣ್ಣು ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲಾಗಿದ್ದು, ಸಾರಿಗೆ ಸುಗಮವಾಗಿ ಸಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಕೋರವಂಗಲ ಫ್ಲೈಓವರ್ ಕಾಮಗಾರಿಯನ್ನು ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಬಿಬಿಎಂಪಿ ಇಂಜಿನಿಯರ್ಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಸಚಿವ ರಾಂಲಿAಗಾ ರೆಡ್ಡಿ, ಬಿಬಿಎಂಪಿ ವಿಶೇಷ ಆಯುಕ್ತ ಅವಿನಾಶ್, ಮುಖ್ಯ ಇಂಜಿನಿಯರ್ ಲೋಕೇಶ್ ಮತ್ತು ಅವರ ಸಿಬ್ಬಂದಿ, ಗುತ್ತಿಗೆದಾರ ರಘುನಾಥ್ ನಾಯ್ಡು ಮತ್ತು ಅವರ ತಂಡ, ಕೋರಮಂಗಲ ನಿವಾಸಿಗಳ ಸಂಘದ ಅಧ್ಯಕ್ಷರು, ರಾಜೇಂದ್ರ ಬಾಬು, ರಘು, ಪಿಳ್ಳಪ್ಪ, ಗೋವರ್ಧನ್ ರೆಡ್ಡಿ (ಅಭಿ), ನಿತಿನ್, ಸತ್ಯ, ಶಂಕರ್ ಶೆಟ್ಟಿ ಮತ್ತು ಇತರ ನಿವಾಸಿಗಳು ಉಪಸ್ಥಿತರಿದ್ದರು.
