ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಂತರ ಇದೀಗ ಆರು ಮೋಸ್ಟ್ ವಾಂಟೆಡ್ ಉಗ್ರರು ಶರಣಾಗಲು ತೀರ್ಮಾನಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಮುಂದೆ ಮೂರು ದಿನಗಳಲ್ಲಿ ಶರಣಾಗಲಿದ್ದಾರೆ.
ವಿಕ್ರಂ ಗೌಡ ಎನ್‌ಕೌಂಟರ್ ನಂತರ ಸರಕಾರ ನಕ್ಸಲರ ಶರಣಾಗತಿ ಅವಕಾಶ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ನಾಲ್ವರು ಮತ್ತು ಆಂಧ್ರ ಪ್ರದೇಶದ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ಶರಣಾಗಲು ತೀರ್ಮಾನಿಸಿದ್ದಾರೆ. ಈ ಸಂಬAಧ ಸಿಎಂ ಸಿದ್ದರಾಮಯ್ಯ ಜತೆಗೆ ಶಾಂತಿ ಸಭೆ ನಡೆಸಿರುವ ಸಂಧಾನ ಸಮಿತಿ ಸದಸ್ಯರು, ಶರಣಾಗತಿಯ ಬಗ್ಗೆ ಪಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಶರಣಾಗತಿಗೆ ನಕ್ಸಲ್ ನಾಯಕರು ಏಳು ಬೇಡಿಕೆಗಳನ್ನಿಟ್ಟಿದ್ದಾರೆ ಎಂದು ಹೇಳಲಾಗಿದೆ. ಆ ಪ್ರಮುಖ ಬೇಡಿಕೆಗಳೇನು ಹಾಗೂ ಈ ಬೇಡಿಕೆಗಳಿಗೆ ಸರಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.