ರಾಜಕೀಯ ಸುದ್ದಿ

18 ಬಿಜೆಪಿ ಶಾಸಕರ ಅಮಾನತು : ರಾಜ್ಯಪಾಲರಿಗೆ ದೂರು ನೀಡಲು ತೀರ್ಮಾನ

Share It

ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಗದ್ದಲದ ಪರಿಣಾಮ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದ್ದು, ಇದರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ.

ರಾಜ್ಯಪಾಲರನ್ನು ಭೇಟಿ ಮಾಡಲಿರವ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಿಯೋಗ ಸ್ಪೀಕರ್ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದ್ದಾರೆ. ರಾಜ್ಯಪಾಲರು ಇರೋಡ್ ಪ್ರವಾಸದಲ್ಲಿದ್ದು, ಅವರ ಕಾರ್ಯದರ್ಶಿಯವರ ಮೂಲಕ ರಾಜ್ಯಪಾಲರಿಗೆ ದೂರು ರವಾನೆ ಮಾಡಲು ನಿಯೋಗ ತೀರ್ಮಾನಿಸಿದೆ.

ಹನಿಟ್ರ್ಯಾಪ್ ಚರ್ಚೆ ಮತ್ತು ವಕ್ಫ್‌ ಬೋರ್ಡ್ ಕಾಯಿದೆ ವಿರೋಧಿಸಿ, ಬಿಜೆಪಿ ಶಾಸಕರು ಸ್ಪೀಕರ್ ಪೀಠದ ಮುಂದೆ ಅಸಭ್ಯವಾಗಿ ವರ್ತನೆ ತೋರಿದ್ದರು. ಕಾಗದಗಳನ್ನು ಹರಿದು ಸ್ಪೀಕರ್ ಕುರ್ಚಿಯ ಮೇಲೆ ತೂರಿದದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲಾವಧಿಗೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷವಾದ ಜೆಡಿಎಸ್ ಶಾಸಕರ ನಿಯೋಗ ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಲು ಸಿದ್ಧತೆ ನಡೆಸಿದೆ. ಈ ವೇಳೆ ರಾಜ್ಯಪಾಲರು ಹೊರರಾಜ್ಯ ಪ್ರವಾಸದಲ್ಲಿದ್ದರೂ, ಅವರ ಕಾರ್ಯದರ್ಶಿ ಮೂಲಕ ಅವರಿಗೆ ದೂರು ರವಾನೆ ಮಾಡಲು ತೀರ್ಮಾನಿಸಲಾಗಿದೆ.


Share It

You cannot copy content of this page