ಶಾಸಕರ ವಿಶೇಷ ಆಸಕ್ತಿಯಿಂದ ನಿರ್ಮಾಣ ವಾಗುತ್ತಿರುವ ಗ್ರಾಮ ಚಾವಡಿ
ವರದಿ: ಮಹಾಂತೇಶ ಹಕ್ಕರಕಿ.
ಅಣ್ಣಿಗೇರಿ: ಅಣ್ಣಿಗೇರಿಯ ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮ ಚಾವಡಿಯ ನೂತನ ಕಟ್ಟಡಕ್ಕೆ ಅಣ್ಣಿಗೇರಿ ತಾಲೂಕ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಬೇಟಿ ನೀಡಿ ಕಾಮಗಾರಿಯನ್ನ ಪರಿಶಿಲಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಮಾತನಾಡಿ, ಬ್ರಿಟೀಷರ ಕಾಲದಲ್ಲಿ ಪ್ರಾರಂಭವಾದ ಗ್ರಾಮ ಚಾವಡಿ ಸಾರ್ವಜನಿಕರಿಗೆ ಕಂದಾಯ ಇಲಾಖೆ ಮೂಲಸೌಕರ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಆದರೆ ಕಟ್ಟಡ ಅತಿವೃಷ್ಟಿಯಿಂದ ಹಾಳಾಗಿತ್ತು. ಆದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ಪರಿಗಣಿಸಿ ನೂತನ ಕಟ್ಟಡವನ್ನು ಪ್ರಾರಂಭಿಸಲಾಗಿದೆ ಈ ಕಟ್ಟಣ ನಿರ್ಮಾಣಕ್ಕೆ ಅಣ್ಣಿಗೇರಿ ಸಾರ್ವಜನಿಕರು ಸಹಾಯ ಸಹಕಾರ ನಿಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಕಂದಾಯ ಇಲಾಖೆಯ ಅಧಿಕಾರಿ ರಿಷಿ ಸಾರಂಗಿ, ಗ್ರಾಮ ಲೆಕ್ಕಾಧಿಕಾರಿ ಮಲ್ಲನಗೌಡ, ಶಂಕರಗೌಡ ಪಾಟೀಲ. ಹಾಗೂ ಸಾರ್ವಜನಿಕರು ಇದ್ದರು.

ಹಳೆಯ ಪುರಾತನ ಗ್ರಾಮ ಚಾವಡಿ ಕಂದಾಯ ಇಲಾಖೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಕಾಲಿಕ ಮಳೆಯಿಂದಾಗಿ ಅದು ತನ್ನ ಶಕ್ತಿ ಕಳೆದುಕೊಂಡ ಹಿನ್ನಲೆಯಲ್ಲಿ ನೂತನ ಕಟ್ಟಡ
ಪ್ರಾರಂಭವಾಗುತ್ತದೆ.
- ಎನ್ ಎಚ್ ಕೋನರಡ್ಡಿ, ಶಾಸಕರು ನವಲಗುಂದ.

