ಸುದ್ದಿ

ಬಾಗಲಕೋಟೆ: ಅಂಧಮಕ್ಕಳು ಸೇರಿ 15 ಜನರಿಗೆ ಹುಚ್ಚುನಾಯಿ ಕಡಿತ

Share It

ಬಾಗಲಕೋಟೆ: ಅಂಧರ ಶಾಲೆಯ 11 ಮಕ್ಕಳು ಸೇರಿ 15 ಜನರಿಗೆ ಹುಚ್ಚುನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ನವನಗರದ ಎಪಿಎಂಸಿ ಬಳಿಯ ಸಂಜೀವಿನಿ ಅಂಧ ಮಕ್ಕಳ ಶಾಲೆಯ ಪಕ್ಕದಲ್ಲಿ ಹುಚ್ಚು ನಾಯಿ ಮಕ್ಕಳಿಗೆ ಕಚ್ಚಿದೆ. ಭಾನುವಾರ ಓವ ಬಾಲಕನಿಗೆ ಕಚ್ಚಿದ್ದ ನಾಯಿ, ಸೋಮವಾರ ಬೆಳಗ್ಗೆ ಸುಮಾರು ೧೦ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ.

ಒಂದೇ ನಾಯಿ ೧೫ ಮಂದಿಗೂ ಕಚ್ಚಿದೆ ಎಂದು ವರದಿಯಾಗಿದೆ. ಇದಲ್ಲಿ ೧೧ ಮಕ್ಕಳು ಮತ್ತು ಉಳಿದವರಿಗೆ ಚಿಕಿತ್ಸೆ ನೀಡಲಾಗಿದೆ. ಎಪಿಎಂಸಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರನ್ನು ಭೀತಿಗೊಳಿಸಿದೆ.


Share It

You cannot copy content of this page