ಮಝಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ನಲ್ಲಿ 176 ಹುದ್ದೆಗಳು: ಇಂದೇ ಅರ್ಜಿ ಸಲ್ಲಿಸಿ

Share It

ಐಟಿಐ ಹಾಗೂ ಡಿಪ್ಲೊಮ ಮುಗಿಸಿ ಒಳ್ಳೆಯ ಕಡೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಿದ್ರೆ ಇಂದೇ ಅರ್ಜಿಯನ್ನು ಸಲ್ಲಿಸಿ. ಹೌದು ಮಝಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ನ ಸುಮಾರು 176 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು , ಕೊನೆಯ ದಿನಾಂಕ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ನೋಡೋಣ ಬನ್ನಿ..

ಮಝಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್ ಕಂಪನಿಯು ಖಾಲಿ ಇರುವ non ಎಕ್ಸಿಕ್ಯೂಟಿವ್ (ಸ್ಕಿಲ್ಡ್‌-I, ID-V, ), ಸೆಮಿ ಸ್ಕಿಲ್ಡ್‌-I – ID-II, ಹಾಗೂ ಇತರೆ ಉದ್ಯೋಗಳಿಗೆ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಇದೆ ಅಕ್ಟೋಬರ್ 16 ಆಗಿರುತ್ತದೆ.

ಈ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. SSLC ಐಟಿಐ ಅಥವಾ
ಡಿಪ್ಲೊಮ ಮುಗಿಸಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಅಂಕಗಳ ಮೇಲೆ ಮೇರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.

ಹುದ್ದೆಗಳ ವಿವರ :

ಎಸಿ ರೆಫ್ರಿಜರೇಷನ್‌ ಮೆಕ್ಯಾನಿಕ್, ಮಿಲ್‌ರೈಟ್ ಮೆಕ್ಯಾನಿಕ್, ಜೂನಿಯರ್ ಪ್ಲಾನರ್ ಎಸ್ಟಿಮೇಟರ್,ಮಾಸ್ಟರ್ ಫಸ್ಟ್‌ ಕ್ಲಾಸ್‌,
ಕಂಪ್ರೆಸರ್ ಅಟೆಂಡಂಟ್, ಡ್ರೈವರ್, ಚಿಪ್ಪರ್ ಗ್ರೈಂಡರ್,ಫೈಯರ್ ಫೈಟರ್ಸ್‌,ಜೂನಿಯರ್ ಡಾಟ್ಸ್‌ಮನ್ (ಮೆಕ್ಯಾನಿಕಲ್ ), ಇಲೆಕ್ಟ್ರಿಕ್ ಕ್ರೇನ್‌ ಆಪರೇಟರ್, , ಹಿಂದಿ ಟ್ರಾನ್ಸ್‌ಲೇಟರ್, ಡೀಸೆಲ್ ಕಮ್ ಮೋಟಾರು ಮೆಕ್ಯಾನಿಕ್, ಇಲೆಕ್ಟ್ರಿಕ್ ಮೆಕ್ಯಾನಿಕ್, ಫಿಟ್ಟರ್ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಇನ್ಸ್‌ಪೆಕ್ಟರ್, ಸೇಲ್‌ ಮೇಕರ್, ಸೆಕ್ಯೂರಿಟಿ ಸಿಪಾಯಿ, ಯುಟಿಲಿಟಿ ಹ್ಯಾಂಡ್ ಮ್ಯಾನ್,

ಇವುಗಳ ಜೊತೆಗೆ ಪ್ಲಾನರ್ ಎಸ್ಟಿಮೇಟರ್ (ಸಿವಿಲ್)- 02, ಇಲೆಕ್ಟ್ರಿಕ್ ಕ್ರೇನ್ ಆಪರೇಟರ್ಸ್‌ -5, ಇಲೆಕ್ಟ್ರೀಷಿಯನ್-17, ಜೂನಿಯರ್ ಡ್ರಾಟ್ಸ್‌ಮನ್ (ಸಿವಿಲ್)-01, ಪ್ಯಾರಾಮೆಡಿಕ್ – 09, ಸೇಫ್ಟಿ ಇನ್ಸ್‌ಪೆಕ್ಟರ್ – 05, ಫೈಯರ್ ಫೈಟರ್ – 32 ಹುದ್ದೆಗಳು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಆರಂಭದ ದಿನಾಂಕ : 11-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
16-10 2024

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :
https://mazagondock.in/app/MDLJobPortal/Login.aspx?msg=n

ಅರ್ಜಿಯ ಶುಲ್ಕ :

ಅಭ್ಯರ್ಥಿಗಳು 350 ರೂ. ಅರ್ಜಿ ಶುಲ್ಕವಾಗಿ ಆನ್ಲೈನ್ ಮೂಲಕ ಪಾವತಿ ಮಾಡಬೇಕು.

ವಯೋಮಿತಿ:

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷ ಮೀರಬಾರದು.


Share It

You May Have Missed

You cannot copy content of this page