ಪಾಟ್ನಾ: ಬಿಹಾರದ ಜೆಹಾನಾಬಾದ್ ಜೆಲ್ಲೆಯ ಬಾರಾವರ್ ಬೆಟ್ಟಗಳಲ್ಲಿ ಸಾಲಿನಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು 3 ಮಹಿಳೆಯರು ಒಳಗೊಂಡಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 35ಕ್ಕೂ ಅಧಿಕ ಮಂದಿ ತೀರ್ವವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಶವಗಳನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಹೆಚ್ಚು ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
“ಜನರನ್ನು ನಿರ್ವಹಿಸಲು ಎಂದು ಇರುವ ಸ್ವಯಂ ಸೇವಕರು ಲಾಠಿ ಪ್ರಹಾರ ನಡೆಸಲು ಮುಂದಾಗಿದ್ದೆ ಕಾಲ್ತುಳಿತಕ್ಕೆ ಕಾರಣ ಎಂದು ಮೃತ ಕುಟುಂಬದ ಸಂತ್ರಸ್ತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.”
ಹತ್ರಾಸ್ ದುರಂತ
ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಕಾಲ್ತುಳಿತ ಸಂಭವಿಸಿದ್ದು 121 ಮಂದಿ ಮೃತ ಪಟ್ಟಿದ್ದರು. ಭೀಕರ ದುರಂತವಾಗಿ ಮಾರ್ಪಟ್ಟಿತ್ತು. ಆ ಬೆನ್ನಲ್ಲೇ ಬಿಹಾರದಲ್ಲಿ ಈ ಘಟನೆ ನಡೆದಿದೆ.