ಅಂಕಣ ಸುದ್ದಿ

ಜಗತ್ತಿನ ಸರ್ವ ಶ್ರೇಷ್ಟ ಸಂವಿಧಾನ ನಮ್ಮದು: ನಮಗಿರಲಿ ಈ ಕುರಿತು ಹೆಮ್ಮೆ

Share It


ಹಳ್ಳಿವೆಂಕಟೇಶ್
1949 ನವೆಂಬರ್ 26 ರಂದು ನಮ್ಮ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನ. ಪ್ರತೀ ವರ್ಷ ಈ ದಿನವನ್ನು ಸಂಭ್ರಮದಿಂದ ಆಚರಿಸುವುದರ ಜತೆಗೆ ಸಂವಿಧಾನದ ಪಾಲನೆಯಾಗುತ್ತಿಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ. ಭಾರತದ ಸಂವಿಧಾನವನ್ನು ಬರೆಯುವಾಗ ಅಮೇರಿಕಾ, ಇಂಗ್ಲೆಂಡ್, ರಷ್ಯಾ, ಜಪಾನ್, ಸ್ವಿಜರ್‌ಲ್ಯಾಂಡ್ ಹೀಗೆ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಯಾವ ರೀತಿಯ ಸಂವಿಧಾನ ಬೇಕು ಎಂಬುದನ್ನು ತೀರ್ಮಾನಿಸಿ ಬರೆದುಕೊಳ್ಳಲಾಗಿದೆ. ಆದರೆ ಪ್ರಗತಿಪರ ಮನಸುಗಳು ಸಂವಿಧಾನವನ್ನು ಒಪ್ಪಿಕೊಂಡು ಅದರ ಹಿತ ಕಾಯುವ ಮನಸ್ಸು ಮಾಡಿದರೆ, ಪ್ರತಿಗಾಮಿ ಮನಸುಗಳು ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಧೋರಣೆಯನ್ನು ಒಳಗೊಂಡಿವೆ.

ರಾಜಕೀಯ ನಾಯಕರು ಚುನಾವಣೆಯನ್ನು ಗೆಲ್ಲುವ ಉದ್ದೇಶಕ್ಕೂ ಮತ್ತು ಸಂವಿಧಾನ ವಿರೋಧಿಗಳನ್ನು ಮೆಚ್ಚಿಸುವ ಕಾರಣಕ್ಕೂ ಸಂವಿಧಾನದ ಬದಲಾವಣೆ ಮಾತನಾಡುತ್ತಾರೆ. ಇನ್ನೂ ಧಾರ್ಮಿಕ ಗುರುಗಳು ತಮ್ಮಲ್ಲಿ ಭಿನ್ನ ನಿಲುವುಗಳನ್ನು ಇರಿಸಿಕೊಂಡು ಪೇಜಾವರ ಶ್ರೀ ಅವರ ನಾಲಗೆಯಲ್ಲಿ ಸಂವಿಧಾನ ಬದಲಾಯಿಸಬೇಕೆಂಬ ಮಾತನ್ನು ಆಡಿಸುತ್ತಾರೆ. ಇವತ್ತಿಗೂ ಉಡುಪಿ ಮಠದಲ್ಲಿ ನಡೆಯುತ್ತಿರುವ ಪಂಕ್ತಿ ಭೇದವನ್ನೇ ಬದಲಾಯಿಸಲಾಗದವರಿಗೆ, ಸಂವಿಧಾನದ ಬದಲಾವಣೆ ಕನಸು ಹುಟ್ಟಿಕೊಂಡಿದೆ. ನಮ್ಮ ಭಾಗದ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪ ಅಂತವರಿಗೂ ಮನುಧರ್ಮ ಶಾಸ್ತ್ರದಲ್ಲಿರುವ ನಂಬಿಕೆ ಸಂವಿಧಾನದ ಮೇಲೆ ಇರುವುದಿಲ್ಲ.

ಸಂವಿಧಾನ ರಚನೆಯಾಗಿ ಎಪ್ಪತ್ತೈದು ವರ್ಷಗಳು ತುಂಬಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಹೊಂದಿಕೊಳ್ಳುತ್ತಿಲ್ಲ ಎಂಬ ಆಲೋಚನೆಗಳು ಹಲವರನ್ನು ಕಾಡುತ್ತಿದೆ. ಧರ್ಮಪುರುಷರಿಗೆ ಭಾರತೀಯ ಸಂವಿಧಾನ ಬದಲಾಗುವುದೇ ಮುಖ್ಯವಾಗಿ ಬೇಕಾಗಿದೆ. ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಾತ್ವಿಕವಾಗಿ ವಿರೋಧ ಮಾಡುವ ಅಂಶದ ಜತೆಗೆ ನಾವೇನೊ ಹೊಸದನ್ನು ನಮಗನಿಸಿದಂತೆ ಬರೆದುಕೊಳ್ಳಬಹುದು ಎನ್ನುವ ಮುಂದಾಲೋಚನೆಯೂ ಇದ್ದಂತಿದೆ. ಕೆಲವೇ ಮೇಲ್ವರ್ಗದ ಹಿತವನ್ನು ಹೊಸ ಸಂವಿಧಾನದಲ್ಲಿ ತಂದು ಇರಿಸಿಕೊಳ್ಳುವ ಕಲ್ಪನೆಯೂ ಇದೆ.

ಭಾರತದ ಬೃಹತ್ ಸಂವಿಧಾನಕ್ಕೆ ನೂರ ಆರು ತಿದ್ದುಪಡಿಗಳನ್ನು ಮಾಡಿಕೊಂಡು ಲಾಭವನ್ನು ಪಡಿಯುತ್ತಿರುವಾಗ, ಪೂರ್ಣ ಲಾಭಕ್ಕೊಸ್ಕರ ಕೆಲವರು ಹಂಬಲಿಸುತ್ತಿದ್ದಾರೆ. ಅಂಬೇಡ್ಕರ್ ಅನುಯಾಯಿಗಳು ಮತ್ತು ಈ ದೇಶದ ತಳ ಸಮುದಾಯದ ಜನ ಸಿಡಿದೆದ್ದರೆ ಸಂವಿಧಾನವನ್ನು ಬದಲಾಯಿಸುವುದಿರಲಿ, ಹೊಸ ಸಂವಿಧಾನ ಬರೆಯುತ್ತೇನೆಂದು ಮುಂದೆ ಬರುವ ಪ್ರಾಜ್ಞರನ್ನು ಮತ್ತು ಬುದ್ಧಿ ಜೀವಿಯನ್ನು ಮೊದಲು ನಮ್ಮ ಜಗತ್ತಿಗೆ ಪರಿಚಯಿಸಬೇಕಿದೆ. ಗೂಗಲ್, ಫೇಸ್‌ಬುಕ್‌ಗಳಲ್ಲಿ ಕೂತು ಕಾಮೆಂಟ್ ಹಾಕುವ ಮಂದಿಗೆ ಸಂವಿಧಾನದ ಆಶಯವಾಗಲಿ ಅದರ ಸಾರ್ಥಕತೆಯಾಗಲಿ ತಿಳಿದಿಲ್ಲ.

ಸಾವಿರಾರು ವರ್ಷಗಳಿಂದ ಈಗಲೂ ಸಮಾನತೆಗಾಗಿ ಆತೊರೆಯುತ್ತಿರುವ ಸಮುದಾಯಗಳಿಗೆ ಸಂವಿಧಾನದ ವಿಧಿಗಳೇ ಗೊತ್ತಿಲ್ಲ. ಸಂವಿಧಾನದ ಮೂಲಕ ಶಿಕ್ಷಣ, ಉದ್ಯೋಗ, ಬದುಕುವ ಸ್ವಾತಂತ್ರವನ್ನು ಪಡೆಯಬಹುದೆಂಬ ಸಣ್ಣ ತಿಳುವಳಿಕೆಯೂ ಮೂಡದಂತೆ ಮಾಡಿರುವ ವರ್ಗಗಳು ಅವರನ್ನು ಕೂಲಿಯ ಆಳುಗಳಾಗಿಯೇ ದುಡುಸಿಕೊಳ್ಳುತ್ತಿವೆ. ಸ್ವಾತಂತ್ರ್ಯ, ಸ್ವಾವಲಂಬನೆ ಎನ್ನುವುದು ಕೆಲವು ಹಿಂದುಳಿದ ವರ್ಗಗಳಿಗೆ ಈಗಲೂ ಮರೀಚಿಕೆಯೆ. ಸಂವಿಧಾನದ ಓದು ಪ್ರತಿಯೊಬ್ಬನ ಕನಸಾಗಬೇಕು. ರಾಷ್ಟçಪ್ರೇಮಿಗಳಿಗೆ ಸಂವಿಧಾನದ ಪ್ರೇಮವಿಲ್ಲದೇ ಇರುವುದು ಯಾಕೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕು.

ಭಾರತಕ್ಕಿಂತ ಮೊದಲೇ ರಚನೆಯಾದ ಸಂವಿಧಾನವನ್ನು ಅಲ್ಲಿಯ ಜನರಾಗಲಿ ಮತ್ತು ರಾಜಕಾರಣಿಗಳಾಗಲಿ ಬದಲಾಯಿಸುತ್ತೇವೆ ಎನ್ನುವ ಸಾಮಾನ್ಯ ಮಾತುಗಳನ್ನು ಆಡುವುದಿಲ್ಲ. ಅಲ್ಲಿಯ ಜನರು ಆ ಸಂವಿಧಾನದ ಕೃತಿಗಳನ್ನು ದೇವರಂತೆ ಭಕ್ತಿಯಿಂದ ನೋಡುತ್ತಾರೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತಾರೆ. ಅಲ್ಲಿ ಬಡವನಾಗಲಿ ಶ್ರೀಮಂತನಾಗಲಿ ಸಂವಿಧಾನಕ್ಕೆ ತಲೆಭಾಗಲೇ ಬೇಕು. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇ ಬೇಕು. ಆದರೆ ನಮ್ಮ ದೇಶದಲ್ಲಿ ಸಂವಿಧಾನ ವಿರುದ್ಧವಾಗಿ ಮಾತನಾಡಿದರೂ ಯಾವುದೇ ಶಿಕ್ಷೆಯಾಗುವುದಿಲ್ಲ. ಅದಕ್ಕೆ ಕಾರಣ ನಮ್ಮ ದೇಶದ ಜನರಿಗೆ ಸಂವಿಧಾನದ ಮೇಲಿರುವ ತಿರಸ್ಕಾರಭಾವ. ಈ ಭಾವನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಈ ದೇಶದ ಪ್ರಜೆಯಾಗಿ ಬದುಕುವ ಅರ್ಹತೆಯೂ ಅವರಿಗಿರುವುದಿಲ್ಲ.


‘ಗ್ರಾನ್ಫ್ಯಿನ್ ಆಸ್ಟ್ರೀನ್’ ಎನ್ನುವ ತೊಂಬತ್ತು ವರ್ಷದ ವಿದೇಶಿ ಸಂಶೋಧಕ, ವಿದ್ವಾಂಸ ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಓದುತ್ತಾ ಬರುತ್ತಾನೆ. ಕೊನೆಗೆ ಭಾರತ ಸಂವಿಧಾನವನ್ನು ಓದಿ”ಜಗತ್ತಿನ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ” ಎಂದು ವ್ಯಾಖ್ಯಾನ ಮಾಡುತ್ತಾನೆ. ಭಾರತೀಯರು ಅವರ ಸಂವಿಧಾನವನ್ನು ಲೆಕ್ಕವಿಲ್ಲದಂತೆ ತಿದ್ದುವುದನ್ನು ಮಾಡಿದ್ದಾರೆಯೇ ಹೊರತು, ಅದರ ನಿಜವಾದ ಅರ್ಥವನ್ನು ಅರಿಯುವಲ್ಲಿ ಸೋತಿದ್ದಾರೆ. ಹಾಗಾಗಿಯೇ ಅವರಿಗೆ ಸಂವಿಧಾನ ಬದಲಾಗಬೇಕು ಎನ್ನುವ ಮನೋಭಾವ ಮೂಡಿದೆ. ಸಂವಿಧಾನ ಭಾರತೀಯ ಪ್ರಜೆಗಳಿಗೆ ತಂದೆ ಇದ್ದಂತೆ, ಅದರ ತತ್ವಗಳು ತಾಯಿಯಿದ್ದಂತೆ ಇಂಥ ತಂದೆ ತಾಯಿಯನ್ನೆ ಬದಲಾಯಿಸುತ್ತೇವೆ ಎನ್ನುವ ಮೂರ್ಖತನ ಯಾರಿಗೂ ಇರಬಾರದು ಎನ್ನುವ ಅಂಶವನ್ನು ಅವನು ಬರೆಯುತ್ತಾನೆ.

ವಿದೇಶಿಗನೊಬ್ಬನಿಗೆ ಭಾರತೀಯ ಸಂವಿಧಾನ ಮೌಲ್ಯಯುತ ಸಂವಿಧಾನ ಅನಿಸಿದೆ ಎಂದರೆ ಭಾರತೀಯರಾದ ನಮಗೂ ಅನಿಸಬೇಕಲ್ಲವೆ? ಸಂವಿಧಾನದ ವಿರುದ್ಧ ಮಾತನಾಡುವವರು ಸಂವಿಧಾನವನ್ನೇ ಓದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಶಾಲೆ ಮತ್ತು ಕಾಲೇಜಿನಲ್ಲಿ ಸಂವಿಧಾನದ ಕೆಲವು ವಿಚಾರಗಳನ್ನು ಮಾತ್ರ ಕಲಿಸಿ ಪರೀಕ್ಷೆ ಬರೆಸುತ್ತೇವೆ. ಆ ಪರೀಕ್ಷೆಯಲ್ಲಿ ಸಂವಿಧಾನದ ಬಗ್ಗೆ ವಿದ್ಯಾರ್ಥಿ ಬರೆಯುವ ಉತ್ತರ ನೋಡಿದರೆ ಆಶ್ಚರ್ಯವಾಗುತ್ತದೆ. ಉಪನ್ಯಾಸಕರು ಹೇಳಿದ ಅಂಶಗಳು ಇಲ್ಲಿ ಮಾಯವಾಗಿ ಅವನೇ ತನಗನಿಸಿದ್ದನ್ನು ಬರೆದು ಬಂದಿರುತ್ತಾನೆ. ಮೌಲ್ಯಮಾಪಕರು ತಮಗನಿಸಿದಷ್ಟು ಅಂಕವನ್ನು ನೀಡಿ ಅವನನ್ನು ಉತ್ತೀರ್ಣ ಮಾಡುತ್ತಾರೆ. ಇದರಿಂದ ಸಂವಿಧಾನದ ನಿಜವಾದ ಶಕ್ತಿ ಯುವಕರಿಗೂ ಅರ್ಥವಾಗುತ್ತಿಲ್ಲ.

ಮನೆ ಮನೆಗೆ ಭಗವದ್ಗೀತೆ ಕೊಡುವವರು ಮತ್ತು ಅಕ್ಷತೆ ಹಂಚುವವರಿಗೆ ಸಂವಿಧಾನ ಹಂಚುವ ಮನಸ್ಸು ಯಾಕೆ ಬರುತ್ತಿಲ್ಲ? ಪ್ರಜಾಪ್ರಭುತ್ವದ ನಿಜವಾದ ಭಗವದ್ಗೀತೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ‘ಸಂವಿಧಾನ’ ಎನ್ನುವುದನ್ನು ಸಂವಿಧಾನದ ಸದುಪಯೋಗ ಪಡೆದವರೆ ಹೇಳಿಕೊಳ್ಳಲು ನಾಚಿಕೊಳ್ಳುತ್ತಾರೆ. ಭಾರತದ ಶೋಷಿತ ಜನರಾಗಲಿ, ಶೋಷಣೆಗೆ ಒಳಗಾಗದವರಾಗಲಿ ಭಾರತದ ಸಂವಿಧಾನ ಒಂದು ವಾರದ ಮಟ್ಟಿಗೆ ರದ್ದಾದರೂ ಉಸಿರು ಕಟ್ಟಿ ಸಾಯುವ ವಾತಾವರಣ ನಿರ್ಮಾಣವಾಗುತ್ತದೆ. ಅದೇ ಕಾರಣಕ್ಕೆ ಭಾರತ ಸಂವಿಧಾನವನ್ನು ಉಸಿರು ಆತ್ಮ ಎಂದು ಕರೆದುಕೊಳ್ಳುತ್ತೇವೆ.

ರಾಜಕೀಯ ನಾಯಕರು ಸಂವಿಧಾನದ ಬಗ್ಗೆ ಒಂದು ಗಂಟೆ ಭಾಷಣ ಮಾಡಿ ಎಂದರೆ, ಮತ್ಯಾರದೋ ಕೈಯಲ್ಲಿ ಬರೆಸಿಕೊಂಡು ಬಂದು ಓದುತ್ತಾರೆ. ಇನ್ನೂ ನಮ್ಮ ಯುವಕರಿಗಂತೂ ಸಂವಿಧಾನವನ್ನು ಓದಿರುವುದರ ಬಗ್ಗೆ ಕೇಳಿದರೆ “ಹೌದು! ಓದಿದ್ದೇವೆ ಪಠ್ಯದಲ್ಲಿ ಎನ್ನುತ್ತಾರೆ. ಇಂಥವರಿಗೆ ಸಂವಿಧಾನವನ್ನು ಓದಿಸುವ ಅವಶ್ಯಕತೆ ಇದ್ದೇ ಇದೆ. ಮನೆ ಮನೆಗೆ ಸಂವಿಧಾನವನ್ನು ಉಚಿತವಾಗಿ ನೀಡಿ ಅಭ್ಯಾಸ ಮಾಡುವಂತೆ ತಿಳಿಸಬೇಕು. ನಮ್ಮ ದೇಶದ ಸಂವಿಧಾನವನ್ನು ನಮಗೆ ಓದುವುದಕ್ಕೆ ಯಾಕೆ ಸಾಧ್ಯವಾಗುವುದಿಲ್ಲ ಎಂಬುದನ್ನು ನಾವೆ ಪ್ರಶ್ನೆ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿ ಓದುವ ಹಂತದಲ್ಲೇ ಅವನಿಗೆ ಸಂಪೂರ್ಣವಾಗಿ ಸಂವಿಧಾನದ ವಿಚಾರವನ್ನು ಧಾರೆಯೆರೆಯಬೇಕಿದೆ. ಸಂವಿಧಾನ ಭಾರತೀಯರ ಕಣ್ಣೂ ಮತ್ತು ಹೃದಯ. ಒಂದು ನೋಡುತ್ತದೆ. ಇನ್ನೊಂದು ನಮ್ಮನ್ನು ನಡೆಸುತ್ತದೆ. ನಾವು ನಡೆ ನುಡಿಯಲ್ಲಿ ತಪ್ಪಿದರೆ ಶಿಕ್ಷಿಸುತ್ತದೆ. ನಾವು ದೇವರಲ್ಲಿ ತಪ್ಪು ಮಾಡಿದರೆ ಕ್ಷಮಿಸು ಎನ್ನುತ್ತೇವೆ. ಸಂವಿಧಾನದ ವಿರುದ್ಧವಾಗಿ ನಡೆದಾಗಲೂ ಸಂವಿಧಾನಕ್ಕೆ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಳ್ಳಬೇಕು. ಮತ್ತೆ ಆ ತಪ್ಪು ಮಾಡದಂತೆ ಎಚ್ಚರವನ್ನು ವಹಿಸಿಬೇಕು. ಭಾರತದಲ್ಲಿ ಅಧಿಕಾರಶಾಹಿ ಮತ್ತು ಆಡಳಿತಶಾಹಿಗಳಿಂದಲೇ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ಇವರು ಮಾಡುವ ಯಡವಟ್ಟುಗಳಿಗೆ ಸಾಮಾನ್ಯ ಜನ ಸಂವಿಧಾನವನ್ನು ಬೈದುಕೊಂಡು ಓಡಾಡುತ್ತಿದ್ದಾರೆ. ಭಾರತೀಯರ ಈ ತಾತ್ಸಾರ ಮನೋಭಾವನೆಗೆ ಕಾರಣ ನಮ್ಮ ಸಂವಿಧಾನ ನೀಡಿರುವ ಸ್ವಾತಂತ್ರö್ಯವನ್ನು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿರುವುದೇ ಆಗಿದೆ.

ಒಬ್ಬ ಭಾರತೀಯ ಪದವಿದರ ಯುವಕ ಹತ್ತಾರು ಕಂಪನಿಗಳಿಗೆ ಬೇಟಿಕೊಟ್ಟು ಉದ್ಯೋಗಕ್ಕಾಗಿ ಮೌಖಿಕ ಪರೀಕ್ಷೆಯನ್ನು ಎದುರಿಸುತ್ತಾನೆ. ಆದರೆ ಅವನಿಗೆ ಉದ್ಯೋಗ ದೊರಕುವುದಿಲ್ಲ. ಅವನು ಕಂಪನಿ ಕೇಳಿದ ಪ್ರಶ್ನೆಗಳೆಲ್ಲವಕ್ಕೂ ಉತ್ತರಿಸುತ್ತಾನೆ. ಆದರೆ ಸಂವಿಧಾನದ ಬಗ್ಗೆ ಒಂದು ಪ್ರಶ್ನೆಗೂ ಉತ್ತರಿಸುವುದಿಲ್ಲ. ವಿದೇಶಿ ಕಂಪನಿ ಅವನಿಗೆ ಕೆಲಸ ನಿರಾಕರಿಸುತ್ತದೆ. ದೇಶದ ಸಂವಿಧಾನವನ್ನೇ ಅರಿಯದ ನೀನು ನಮ್ಮ ಕಂಪನಿಯ ಅಜೆಂಡಾಗಳನ್ನು ಹೇಗೆ ಗ್ರಹಿಸಲು ಸಾಧ್ಯ ಎಂದು ಉದ್ಯೋಗ ನೀಡದೆ ಕಳಿಸುತ್ತದೆ. ಆಗಲೂ ಅವನು ನಮ್ಮ ಸಂವಿಧಾನವನ್ನು ಓದುವ ಮನಸ್ಸು ತೋರದೆ ಬಾಯಿಗೆ ಬಂದAತೆ ಸಂವಿಧಾನಕ್ಕೆ ಶಾಪ ಹಾಕಿಕೊಂಡು ಓಡಾಡುತ್ತಾನೆ.
ಭಾರತೀಯನ ಮನಸ್ಥಿತಿ ಬದಲಾಗಬೇಕು. ಸಂವಿಧಾನ ಹೀಗೆ ಇರಬೇಕು. ಹೊಸದನ್ನ ಬರೆದುಕೊಳ್ಳುತ್ತೇವೆ ಎನ್ನುವ ವ್ಯಕ್ತಿಗೆ ಸಂವಿಧಾನ ಓದಿದ ಅನುಭವಗಳಿಲ್ಲ. ನಮಗನಿಸಿದಂತೆಯೆಲ್ಲ ಸಂವಿಧಾನವನ್ನು ಬದಲಾಯಿಸುವುದಾದರೆ ಮನೆಗೊಂದು ವ್ಯಕ್ತಿಗೊಂದು ಸಂವಿಧಾನ ಸೃಷ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬರುತ್ತದೆ. ಜಗತ್ತಿನ ಮುಂದೆ ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಭಾರತೀಯ ಸಂವಿಧಾನಕ್ಕೆ ಸಾವಿರಾರು ವರ್ಷಗಳ ಆಯುಷ್ಯವಿದೆ ಎನ್ನುವುದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡವರ ಸಂಖ್ಯೆ ಕೇವಲ ಒಂದಕ್ಕಿಂತ ಕಡಿಮೆ ಎಂಬುದು ತೀರ ಮುಜುಗರ ತರಿಸುವಂತದ್ದು.

ಭಾರತೀಯ ಪ್ರಜೆಗಳಾದ ನಾವೆಲ್ಲ ‘ಮನೆಯಲ್ಲೊಂದು ಸಂವಿಧಾನ, ದಿನಕ್ಕೊಂದು ಅಧ್ಯಾಯ’ ಎನ್ನುವ ಪರಿಪಾಠವನ್ನು ರೂಢಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಸಂವಿಧಾನದ ಬಗ್ಗೆ ಅಪಪ್ರಚಾರಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳಿಗೆ ಮತ್ತು ಯುವಕರಿಗೆ ಸಂವಿಧಾನ ಜಾಗೃತಿ ಮೂಡಿಸಬೇಕಿದೆ. ಕಾಲೇಜಿನಲ್ಲಿ ಸಂವಿಧಾನದ ದಿನವನ್ನು ಮಾಡಿ ಪ್ರಬಂಧ ಸ್ಪರ್ಧೆಗೆ ಬನ್ನಿ ಎಂದರೆ ಒತ್ತಾಯ ಪೂರ್ವಕವಾಗಿ ಮೂರು ಜನ ಬರುತ್ತಾರೆ. ಅವರು ಬರೆದದ್ದಕ್ಕೆ ಬಹುಮಾನ ಪಡೆಯುತ್ತಾರೆ. ಉಳಿದ ಸಾವಿರ ವಿದ್ಯಾರ್ಥಿಗಳು ಪ್ರಬಂಧ ಬರೆಯುವವರನ್ನು ಕಾಲೆಳೆಯುತ್ತಾರೆ. ಇಂಥ ಅಸಮರ್ಥ ಮನಸುಗಳಿಗೆ ಸಂವಿಧಾನದ ತೀಕ್ಷಣತೆ ಅರ್ಥವಾಗಬೇಕಾದರೆ ಸಂವಿಧಾನದ ಓದನ್ನು ಕಡ್ಡಾಯ ಮಾಡಲೇ ಬೇಕು. ಸಂವಿಧಾನವನ್ನು ಹೊಸದಾಗಿ ಬರೆಸುತ್ತೇವೆ ಎನ್ನುವವರೂ ಒಮ್ಮೆ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಲೋಪಗಳನ್ನು ಆಮೇಲೆ ವಿವರಿಸುವಂತೆ ಕೋರಿಕೆ. ಅದರ ಹೊರತು ಸಂವಿಧಾನದ ಬದಲಾವಣೆಯ ಮಾತು


Share It

You cannot copy content of this page