ಸುದ್ದಿ

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭರ್ಜರಿ ಬೇಸಿಗೆ ಮಳೆ!

Share It

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕಳೆದ ಭಾನುವಾರ ಭರ್ಜರಿಯಾಗಿ ಬೇಸಿಗೆ ಮಳೆ ಸುರಿದಿದೆ.
ತಾಲ್ಲೂಕಿನ ದೇವಸಮುದ್ರದಲ್ಲಿ ಗರಿಷ್ಠ 21.4 ಮಿಲಿಮೀಟರ್ ಮಳೆ ಸುರಿದಿದೆ. ಮೊಳಕಾಲ್ಮೂರಿನಲ್ಲಿ 14.6 ಮಿಲಿ ಮೀಟರ್ ಮಳೆಯಾಗಿದೆ.
ಇದರಿಂದ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಚೆಕ್ ಡ್ಯಾಂಗಳು, ಗೋಕಟ್ಟೆಗಳು, ಕೆರೆ-ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಇದರಿಂದ ಮೊಳಕಾಲ್ಮೂರು ತಾಲ್ಲೂಕಿನ ಬಹುತೇಕ ಗ್ರಾಮಗಳ ರೈತರು ಬಹಳ ಸಂತಸದಿಂದ ಕುಣಿದಾಡಿದ್ದಾರೆ.


Share It

You cannot copy content of this page