ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿದ್ದ ಸುಧೀರ್ಘ ಯುದ್ಧ ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಯುದ್ಧವನ್ನು ಕೈ ಬಿಡುವ ಬಗ್ಗೆ ಚರ್ಚೆ ಆರಂಭವಾಗಿದ್ದು ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮದ ಬಗ್ಗೆ ಸೋಮವಾರವೇ ಚರ್ಚೆಯು ನಡೆದಿತ್ತು, ಯುದ್ಧವು 2023 ರ ಅ. 7 ರಂದು ಆರಂಭವಾಯಿತು. ಹಮಾಸ್ ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಮಾಡಿಕೊಂಡು ಅದರ ಆರ್ಥಿಕತೆ ಮೇಲೆ ದಾಳಿ ಮಾಡಿತು.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಜಾದ ಮೇಲೆ ದಾಳಿ ಮಾಡಿತು. ಸದ್ಯ ಹಮಾಸ್ ಕದನ ಮೊಟಕು ಗೊಳಿಸಲು ನಿರ್ಧರಿಸಿದೆ. ಕದನ ವಿರಾಮ ನೀಡಲು ಅಮೆರಿಕ , ಈಜಿಪ್ಟ್ ಹಾಗೂ ಕತಾರ್ ಮಧ್ಯಸ್ಥಿಕೆ ವಹಿಸಲಿವೆ. ಹಾಗೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಹಮಾಸ್ ನೀಡಿಲ್ಲ ಎಂಬುದು ಗಮನಾರ್ಹ.
ಒಂದು ಪ್ರಸ್ತಾವನೆನ್ನು ಸಲ್ಲಿಸಿದ್ದು ಎರಡು ದೇಶದ ಪ್ರಮುಖರು ಕುಳಿತು ಚರ್ಚಿಸಿ ಅನುಮೋದಿಸಲಿದ್ದಾರೆ. ಸದ್ಯ ಮಾಹಿತಿಯ ಪ್ರಕಾರ ಗಲ್ಫ್ ರಾಷ್ಟ್ರದ ಸಮಾಲೋಚಕರು ಹಮಾಸ್ ಮೇಲೆ ಒಪ್ಪಂದ ಒಪ್ಪಿಕೊಳ್ಳುವಂತೆ ಒತ್ತಡ ಏರುತ್ತಿದ್ದರೆ. ಅತ್ತ ಇಸ್ರೇಲ್ ಮೇಲೆ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜ. 20 ರ ಒಳಗಾಗಿ ಯುದ್ದಕ್ಕೆ ತೆರೆ ಎಳೆಯುವ ಗುರಿ ಇದೆ ಎಂದು ತಿಳಿದು ಬಂದಿದೆ.