ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣ ಆಡಳಿತದ ಇ-ಮೇಲ್ಗೆ ಬಂದಿರುವ ಬೆದರಿಕೆಯಲ್ಲಿ “ಚೆನ್ನೆöÊನಿಂದ ಬೆಳಗಾವಿಗೆ ಬರುವ ವಿಮಾನದಲ್ಲಿ ಬಾಂಬ್ ಇಟ್ಟಿದ್ದು, ಇಡೀ ನಿಲ್ದಾಣವನ್ನು ಉಡೀಸ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಬೆಳಗಾವಿಗೆ ಯಾವುದೇ ವಿಮಾನ ಚೆನ್ನೆöÊನಿಂದ ಬರುವುದಿಲ್ಲ, ಮತ್ತು ಹೋಗುವುದಿಲ್ಲ. ಹೀಗಿದ್ದೂ, ಈ ಬೆದರಿಕೆ ಹಿನ್ನೆಲೆಯೇನು ಎಂಬುದು ಪೊಲೀಸರಿಗೆ ತಲೆನೋವಾಗಿದೆ.
ಬಾಂಬ್ ಬೆದರಿಕೆ ಜಾಡುಹಿಡಿದಿರುವ ಪೊಲೀಸರು, ಇಮೇಲ್ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಚೆನ್ನೆöÊನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿರುವುದರಿಂದ ಇದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಲು ಕಾರ್ಯಪ್ರವೃತ್ತರಾಗುತ್ತಿದ್ದಾರೆ. ವಿಮಾನ ನಿಲ್ದಾಣದ ಭದ್ರತೆಯ ಮತ್ತು ತಪಾಸಣೆಯ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶಕ್ಕೆ ಸಂಬAಧಿಸಿದAತೆ ದೂರು ದಾಖಲಾಗಿದ್ದು, ಇ-ಮೇಲ್ ಎಲ್ಲಿಂದ ಬಂದಿದೆ? ಯಾರು ಕಳುಹಿಸಿದ್ದು? ಯಾರಾದರೂ ಕಿಡಿಗೇಡಿಗಳು ಕಳುಹಿಸಿದ್ದಾ ಅಥವಾ ಇದರ ಹಿಂದೆ ಯಾವುದೇ ಉಗ್ರ ಸಂಘಟನೆಗಳ ಕೈವಾಡವಿದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

